Friday, September 13, 2024
Homeಕರಾವಳಿಉಪ್ಪಿನಂಗಡಿ, ಸೌತಡ್ಕ ಮತ್ತು ಪನೋಳಿಬೈಲು ದೈವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ, ಸೌತಡ್ಕ ಮತ್ತು ಪನೋಳಿಬೈಲು ದೈವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೃದಯಾಘಾತದಿಂದ ನಿಧನ

spot_img
- Advertisement -
- Advertisement -

ಪುತ್ತೂರು: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಮತ್ತು ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಪನೋಳಿಬೈಲು ಕಲ್ಲುರ್ಟಿ ದೈವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ ಅವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಸವಣೂರು ಕುಂಜಾಡಿ ನಿವಾಸಿಯಾಗಿರುವ ಹರಿಶ್ಚಂದ್ರ ಅವರು ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿಂದೆ ಪುತ್ತೂರು ಉಪವಿಭಾಗದ ದೇವಸ್ಥಾನಗಳ ಆಡಳಿತ ಪರಿವೀಕ್ಷಣಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಅವರು ಉಪ್ಪಿನಂಗಡಿ, ಪನೋಳಿಬೈಲು ಮತ್ತು ಸೌತಡ್ಕ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -
spot_img

Latest News

error: Content is protected !!