ಬಂಟ್ವಾಳ: ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸರಳವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಭಾರತೀಯ ಜನತಾ ಪಾರ್ಟಿ ಬಂಟ್ವಾಳದ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿ.ಜೆ.ಪಿಯ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಡಾ.ಬಿ.ಅರ್. ಅಂಬೇಡ್ಕರ್ ರ ಮುಂದಾಲೊಚನೆಯ ಸಂವಿಧಾನ ರಚನೆಯಿಂದಾಗಿ ಇಂದು ದೇಶದ ಒಬ್ಬ ಸಾಮಾನ್ಯ ಪ್ರಜೆ ಕೂಡ ದೇಶದ ಪ್ರಧಾನಿ,ರಾಷ್ಟ್ರಪತಿ ಮುಂತಾದ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಾಗಿದೆ ಎಂದರು.
ಸಭೆಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ,,ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ರವಿಶ್ ಶೆಟ್ಟಿ ,ಡೊಂಬಯ ಅರಳ, ಮೋನಪ್ಪ ದೇವಸ್ಯ,ಆನಂದ ಶಂಭೂರು, ಪುರುಷೋತ್ತಮ ಶೆಟ್ಟಿ ಸುದರ್ಶನ್ ಬಜ ಕಾರ್ತಿಕ್ ಬಲ್ಲಾಳ್,ಪ್ರಣಾಮ್,ತಿರುಲೇಶ್,ಕೇಶವ, ಗುರುದತ್ತ್ ,ಗಣೇಶ, ಸುರೇಶ್ ಮೈರ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ: ಬಿಜೆಪಿ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಣೆ
- Advertisement -
- Advertisement -
- Advertisement -