ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 11 ಜನರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವಂತ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಹಾಗಾದ್ರೇ ರಾಜ್ಯದಲ್ಲಿ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಕೊರೊನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ ಎನ್ನುವ ಬಗ್ಗೆ ಮುಂದೆ ಓದಿ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ನಿನ್ನೆ ಹೊಸದಾಗಿ 17 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿತ್ತು. ಇಂದು ಮತ್ತೆ 11 ಜನರಿಗೆ ಕೊರೋನಾ ಸೋಂಕು ತಗಲುವ ಮೂಲಕ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಜಿಲ್ಲಾ ವಾರು ಸೋಂಕಿತರ ಸಂಖ್ಯೆ ಈ ಕೆಳಗಿನಂತಿದೆ.
ಜಿಲ್ಲಾವಾರು ಸೋಂಕಿತರ ಸಂಖ್ಯೆ ಹೀಗಿದೆ
- ಬೆಂಗಳೂರು – 80
- ಮೈಸೂರು – 48
- ದಕ್ಷಿಣಕನ್ನಡ – 12
- ಚಿಕ್ಕಬಳ್ಳಾಪುರ – 09
- ಉತ್ತರಕನ್ನಡ -09
- ಕಲಬುರ್ಗಿ – 16
- ಬಳ್ಳಾರಿ – 06
- ದಾವಣಗೆರೆ – 03
- ಉಡುಪಿ – 03
- ಧಾರವಾಡ – 06
- ಕೊಡಗು – 01
- ತುಮಕೂರು – 01
- ಬೀದರ್ – 13
- ಬಾಗಲಕೋಟೆ – 12
- ಬೆಳಗಾವಿ – 18
- ಬೆಂಗಳೂರು ಗ್ರಾಮಾಂತರ – 05
- ಗದಗ – 01
- ಮಂಡ್ಯ – 08
- ವಿಜಯಪುರ – 07
ಒಟ್ಟಾರೆಯಾಗಿ ರಾಜ್ಯದಲ್ಲಿ ಇದುವರೆಗೆ 258 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿನಿಂದಾಗಿ 9 ಜನರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರಾದಂತ 65 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂಬುದಾಗಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ.