ಕೊರೋನಾ ಮಹಾಮಾರಿಯಿಂದ ಇಡೀ ಜಗತ್ತೆ ಲಾಕ್ ಡೌನ್ ಪರಿಸ್ಥಿತಿ ಎದುರಿಸುತ್ತಿದ್ದು ಮನೆಯಲ್ಲಿ ಕೂರಲು ಸಾಧ್ಯವಾಗದೆ ಜನರು ರಸ್ತೆಗಿಳಿಯುತ್ತಿದ್ದಾರೆ. ಈ ನಡುವೆ ಪೊಲೀಸರು ಸಹ ಹೊರಗೆ ಬಂದವರನ್ನು ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಲಾಕ್ ಡೌನ್ ಉಲ್ಲಂಘಿಸಿ ಮನೆಯಿಂದ ಹೊರಬಂದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದರಿಂದ ಕೋಪಗೊಂಡ ಮಹಿಳೆ ವಿಚಿತ್ರವಾಗಿ ಪ್ರತಿಭಟನೆ ನಡೆಸಿದ್ದಾಳೆ.
ಸ್ಪೇನ್ ನಲ್ಲಿ ಈ ಘಟನೆ ನಡೆಸಿದ್ದು ಅಲ್ಲಿ ಕೊರೋನಾ ರೌದ್ರತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಗೆ ಆದೇಶಿಸಿತ್ತು. ಆದರೆ ಟೊರೆಮೊಲಿನೋಸ್ ನಗರದ ಕೋಸ್ಟಾ ಡೆಲ್ ಸಾಲ್ ರೆಸಾರ್ಟ್ ನಲ್ಲಿ ತಂಗಿದ್ದ 41 ಮಹಿಳೆ ಲಾಕ್ ಡೌನ್ ಉಲ್ಲಂಘಿಸಿದ್ದರು.
ಹೀಗಾಗಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದರಿಂದ ಕೋಪಗೊಂಡ ಆಕೆ ಮೈಮೇಲಿದ್ದ ಬಟ್ಟೆಗಳನ್ನೆಲ್ಲಾ ಬಿಚ್ಚಿ ಪೊಲೀಸರ ಕಾರಿನ ಮೇಲೆ ಹತ್ತಿ ಘೋಷಣೆ ಕೂಗಿದ್ದಾಳೆ.
ಈ ವೇಳೆ ಪೊಲೀಸರು ಆಕೆಯನ್ನು ಹರಸಾಹಸ ಪಟ್ಟು ಸೆರೆಹಿಡಿದು ಆಯಂಬುಲೆನ್ಸ್ ಮೂಲಕ ಕರೆದೊಯ್ದರು.