Saturday, June 20, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ಅಕ್ರಮವಾಗಿ ಸಾಗಿಸುತ್ತಿದ್ದ 16 ಜಾನುವಾರುಗಳು ಪತ್ತೆ: ಪ್ರಕರಣ ದಾಖಲು

ಉಪ್ಪಿನಂಗಡಿ; ಅಕ್ರಮವಾಗಿ ಸಾಗಿಸುತ್ತಿದ್ದ 16 ಜಾನುವಾರುಗಳು ಪತ್ತೆ: ಪ್ರಕರಣ ದಾಖಲು

- Advertisement -
- Advertisement -

ಉಪ್ಪಿನಂಗಡಿ; ದಿನಾಂಕ: 17.06.2026 ರಂದು ಬೆಳಿಗ್ಗೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರು (ಕಾ&ಸು) ಸುತೇಶ್‌ ಕೆ ಪಿ ರವರು ಸಿಬ್ಬಂದಿಯೊಂದಿಗೆ ಉಪ್ಪಿನಂಗಡಿ, ಆನೆಬೈಲು ಎಂಬಲ್ಲಿ,  ಕೆ ಎ 14-ಎ-7511 ನೇ ಈಚರ್ ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ 16 ಜಾನುವಾರುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿತ್ತು. ಆ ಲಾರಿಯಲ್ಲಿದ್ದ ಚಾಲಕ ಕಡೂರು ನಿವಾಸಿ ಪರ್ದಿನ್ ಖಾನ್ (24) ಹಾಗೂ ಮತ್ತೋರ್ವ ಹಾಸನ ಹೋಳೆನರಸಿಪುರ ನಿವಾಸಿ ಜಾವೀದ್ ಪಾಷಾ (34) ಎಂಬವರುಗಳಲ್ಲಿ  ಜಾನುವಾರು ಸಾಗಾಟದ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹೊಂದದೇ ಅಕ್ರಮವಾಗಿ ಸಾಗಿಸುತ್ತಿರುವುದು ತಿಳಿದುಬಂದಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿಯನ್ನು ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 91/2026, ಕಲಂ: 5, 6 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ:11(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆ ಮತ್ತು ಕಲಂ: 3(5) ಬಿ ಎನ್ ಎಸ್ 20232) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!