Saturday, June 20, 2026
Homeಕರಾವಳಿಉಜಿರೆ SDM ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ 2026 ಸಹಾಯ ಕೇಂದ್ರ ಆರಂಭ

ಉಜಿರೆ SDM ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ 2026 ಸಹಾಯ ಕೇಂದ್ರ ಆರಂಭ

- Advertisement -
- Advertisement -

ಬೆಳ್ತಂಗಡಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಸಿಇಟಿ-2026ರ ಆನ್‌ಲೈನ್ ವಿಭಾಗದಲ್ಲಿ ದಾಖಲೆ ಪ್ರಕ್ರಿಯೆಯು ಆರಂಭಗೊಂಡಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಇಂಜಿನಿಯರಿಂಗ್ ಮಹಾವಿದ್ಯಾಲಯದ ವತಿಯಿಂದ ಜೂನ್ 21 ರಿಂದ ವಿಶೇಷ ಸಹಾಯ ಕೇಂದ್ರವನ್ನು ಆರಂಭಿಸಲಾಗುತ್ತಿದೆ.

ರಾಜ್ಯಾದ್ಯಂತ ಇರುವ ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಅಶೋಕ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಾಯ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್, ಸಿಇಟಿ ಸೀಕ್ರೆಟ್ ಕೀ, ವೆರಿಫಿಕೇಶನ್ ಸ್ಲಿಪ್ ಹಾಗೂ ಪಾಸ್‌ವರ್ಡ್ ಅನ್ನು ಕಡ್ಡಾಯವಾಗಿ ಜೊತೆಗೆ ತರಬೇಕಾಗಿ ಕೋರಲಾಗಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಬೆಳಗ್ಗೆ 10 ರಿಂದ ಸಂಜೆ 4 ರ ಅವಧಿಯಲ್ಲಿ ಪ್ರೊ. ರಾಧಾಕೃಷ್ಣ (9611037015) ಅವರನ್ನು ಸಂಪರ್ಕಿಸಬಹುದಾಗಿದೆ.

ಇದೇ ವೇಳೆ, ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯೂ ಆರಂಭಗೊಂಡಿದ್ದು, ಆಡಳಿತ ಮಂಡಳಿ ಕೋಟಾದಡಿ (Management Quota) ಪ್ರಮುಖ ವಿಭಾಗಗಳಲ್ಲಿ ಸೀಟುಗಳು ಲಭ್ಯವಿವೆ. ಕಂಪ್ಯೂಟರ್ ಸೈನ್ಸ್ (CSE), ಇನ್ಫರ್ಮೇಶನ್ ಸೈನ್ಸ್ (ISE), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ (AI & DS), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ (ECE), ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (EEE) ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶಾತಿ ಮತ್ತು ಸೀಟುಗಳ ಕಾಯ್ದಿರಿಸುವಿಕೆಗಾಗಿ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ 8762127991 ಅಥವಾ ದೂರವಾಣಿ ಸಂಖ್ಯೆ 08256-236961 / 237721 ಅನ್ನು ಸಂಪರ್ಕಿಸಲು ಕೋರಲಾಗಿದೆ.

- Advertisement -

Latest News

error: Content is protected !!