Wednesday, May 22, 2024
Homeಪ್ರಮುಖ-ಸುದ್ದಿಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ಕೊರೊನಾಗೆ ಬಲಿ

ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ಕೊರೊನಾಗೆ ಬಲಿ

spot_img
- Advertisement -
- Advertisement -

ಲಖನೌ: ಜಗತ್ತನ್ನೆ ತಲ್ಲಣಗೊಳಿಸಿರುವ ಕರೊನಾ ಸೋಂಕು ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಸಚಿವೆಯೊಬ್ಬರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ವರುಣ್(62) ಸೋಂಕಿಗೆ ಒಳಗಾಗಿ ಮೃತಪಟ್ಟವರು. ಅವರು ಉತ್ತರ ಪ್ರದೇಶದ ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದರು.

ಕಾನ್ಪುರದ ಘಟಂಪುರ ಕ್ಷೇತ್ರದ ಶಾಸಕಿಯಾಗಿದ್ದ ಕಮಲಾ ರಾಣಿ 11 ಮತ್ತು 12ನೇ ಅವಧಿಯ ಲೋಕಸಭೆಯ ಸದಸ್ಯರೂ ಆಗಿದ್ದರು. ಕಮಲಾ ರಾಣಿ ಅವರಿಗೆ ಜುಲೈ 18ರಂದು ಕರೊನಾ ದೃಢಪಟ್ಟಿದ್ದು, ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನ ಗುಣಲಕ್ಷಣ ಉಲ್ಬಣಗೊಂಡ ಕಾರಣ ನಂತರ ಅವರನ್ನು ಎಸ್​ಜಿಪಿಜಿಐಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಸಚಿವೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಲ್ಲದೆ, ಮೃತರ ಗೌರವಾರ್ಥ ಎಲ್ಲ ಶೋಕಾಚರಣೆ ಘೋಷಿಸಿದೆ. ಹೀಗಾಗಿ ಇಂದು ನಿಗದಿಯಾಗಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಯೋಧ್ಯೆ ಭೇಟಿಯೂ ರದ್ದುಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಸಚಿವೆ ಕಮಲಾ ರಾಣಿ ಅವರ ನಿಧನದ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!