Thursday, June 4, 2026
Homeಕರಾವಳಿರಾಜ ಕೇಸರಿ ಸಂಘಟನೆ ವಗ್ಗ ಶಾಖೆ ಉದ್ಘಾಟನೆ

ರಾಜ ಕೇಸರಿ ಸಂಘಟನೆ ವಗ್ಗ ಶಾಖೆ ಉದ್ಘಾಟನೆ

- Advertisement -
- Advertisement -

ಬೆಳ್ತಂಗಡಿ : ಅಖಿಲ ಕರ್ನಾಟಕ ರಾಜ ಕೇಸರಿ (ರಿ) ಸಂಘಟನೆಯ ಸಹ ಸಂಘಟನೆ ರಾಜ ಕೇಸರಿ ವಗ್ಗ ಇದರ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.
ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಅಖಿಲ ಕರ್ನಾಟಕ ರಾಜ ಕೇಸರಿಯ ಸಂಸ್ಥಾಪಕ ದೀಪಕ್ ಜಿ, ರಾಜ ಕೇಸರಿ ವಗ್ಗ ಇದರ ಪದಾಧಿಕಾರಿಗಳಿಗೆ ಹಾಗೂ 21 ಸದಸ್ಯರುಗಳಿಗೆ ಶಾಲುಹೊದಿಸಿ ಹಣೆಗೆ ತಿಲಕವಿಟ್ಟು ರಾಜ ಕೇಸರಿ ಸಂಘಟನೆಗೆ ಬರಮಾಡಿಕೊಂಡರು.


ಕಾರ್ಯಕ್ರಮದಲ್ಲಿ ರಾಜ ಕೇಸರಿ ವಗ್ಗ ಇದರ ಅಧ್ಯಕ್ಷ ಗಣೇಶ್ , ವಗ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೋದ್ ಕುಮಾರ್ , ಸಾಯಿ ಫ್ರೆಂಡ್ಸ್ ಅಧ್ಯಕ್ಷ ಚೇತನ್, ರಾಜ ಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕಾರ್ತಿಕ್,ರಾಜ ಕೇಸರಿ ಬಸವನ ಬೈಲು ನೆಲ್ಲಿಗುಡ್ಡೆ ಇದರ ಅಧ್ಯಕ್ಷ ಪ್ರಸಾದ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ ವಗ್ಗ ಸಮೀಪದ ಮೂರು ಅರ್ಹ ಕುಟುಂಬಗಳಿಗೆ ತಲಾ 25 ಕೆಜಿ ಅಕ್ಕಿ ವಿತರಿಸಲಾಯಿತು .
ರಾಜ ಕೇಸರಿ ವಗ್ಗ ಘಟಕದ ಕಾರ್ಯದರ್ಶಿ ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.

- Advertisement -

Latest News

error: Content is protected !!