ಮುಂಬಯಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನದ ಕಥೆಯನ್ನು ಆಧರಿಸಿಕೊಂಡು ‘‘ಅಜಯ್- ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’ ಎನ್ನುವ ಸಿನಿಮಾವೊಂದು ಬರುತ್ತಿದೆ.
ಸಿನಿಮಾದ ಮೊದಲ ಹಂತವಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪಿಕ್ಚರ್ ರಿಲೀಸ್ ಆಗಿದ್ದು, ಯೋಗಿ ಆದಿತ್ಯನಾಥ್ ಅವರ ಪಾತ್ರಕ್ಕೆ ಅನಂತ ಜೋಶಿ ಅವರು ಬಣ್ಣ ಹಚ್ಚಲಿದ್ದಾರೆ.
ಈ ಸಿನಿಮಾದ ಕಥನವು ಮಧ್ಯಮ ವರ್ಗದ ಹುಡುಗಗೊಬ್ಬ ಯೋಗಿಯಿಂದ ಸಿಎಂ ಸ್ಥಾನಕ್ಕೆ ತಲುಪಿದ್ದು ಹೇಗೆ ಹಾಗೂ ವರ ಬಾಲ್ಯ, ಕುಟುಂಬ ಹಾಗೂ ರಾಜಕೀಯ ಸನ್ನಿವೇಶಗಳ ಸುತ್ತ ಈ ಕಥೆ ಸಾಗಲಿದೆ.
https://www.youtube.com/watch?v=nArSU-RaIeQ
ಚಿತ್ರಕ್ಕೆ ರಿತು ಮೆಂಗಿ ಬಂಡವಾಳ ಹಾಕಿದ್ದು, ಮ್ಯೂಸಿಕ್ ಅನ್ನು ಮೀಟ್ ಬ್ರದರ್ಸ್ ನೀಡಲಿದ್ದಾರೆ. ಪರೇಶ್ ರಾವಲ್, ದಿನೇಶ್ ಲಾಲ್ ಯಾದವ್, ಅಜಯ್ ಮೆಂಗಿ, ಪವನ್ ಮಲ್ಹೋತ್ರಾ, ರಾಜೇಶ್ ಖಟ್ಟರ್, ಗರಿಮಾ ವಿಕ್ರಾಂತ್ ಮತ್ತು ಸರ್ವರ್ ಅಹುಜಾ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.