Sunday, August 30, 2026
Homeಕರಾವಳಿಸುಳ್ಯದ ಕುಕ್ಕುಜಡ್ಕದಲ್ಲಿ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಪರಾರಿಯಾದ ಅಪರಿಚಿತರು: ವಿದ್ಯಾರ್ಥಿನಿ ಕಿಡ್ನ್ಯಾಪ್ ಗೆ ನಡೀತಾ ಯತ್ನ?

ಸುಳ್ಯದ ಕುಕ್ಕುಜಡ್ಕದಲ್ಲಿ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಪರಾರಿಯಾದ ಅಪರಿಚಿತರು: ವಿದ್ಯಾರ್ಥಿನಿ ಕಿಡ್ನ್ಯಾಪ್ ಗೆ ನಡೀತಾ ಯತ್ನ?

- Advertisement -
- Advertisement -

ಸುಳ್ಯ: ಇಲ್ಲಿನ ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕದ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳಿಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಾಸಾಯನಿಕ ಸ್ಪ್ರೇ ಸಿಂಪಡಿಸಿ ಪರಾರಿಯಾದ ಘಟನೆ ನಡೆದಿದೆ.

ಜೋಗಿಯಡ್ಕದ ಬಾಲಕಿ ಮಧ್ಯಾಹ್ನ ಕುಕ್ಕುಜಡ್ಕದ ಶಾಲೆಗೆ ಬರುತ್ತಿದ್ದಳು.ಈ ವೇಳೆ ಆನೇಕಾರ್ ಸಮೀಪ ಬೈಕ್ ನಲ್ಲಿ ಬಂದ ಅಪರಿಚಿತರು ರಾಸಾಯನಿಕ ಸ್ಪ್ರೇಯನ್ನು ಬಾಲಕಿಯ ಮುಖಕ್ಕೆ ಸಿಂಪಡಿಸಿದ್ದಾರೆ.ಕೂಡಲೇ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ರಸ್ತೆಯಲ್ಲಿ ಬೇರೆ ವಾಹನ ಬರುತ್ತಿದ್ದ ಸದ್ದು ಕೇಳಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನು ಇದೇ ದಾರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿ ರಿಕ್ಷಾದಲ್ಲಿ ಬರುತ್ತಿದ್ದವರು ಬಾಲಕಿ ಬಿದ್ದಿದ್ದನ್ನು ಗಮನಿಸಿ ಆಕೆಯನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.

ಪ್ರಜ್ಞೆ ಬಂದ ಬಳಿಕ ಬಾಲಕಿ ಬೈಕ್ ನಲ್ಲಿ ಬಂದವರು ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾಳೆ.ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.ಇನ್ನು ಬಾಲಕಿಯನ್ನು ಅಪಹರಿಸೋದಕ್ಕೆ ಈ ರೀತಿ ಸ್ಪ್ರೇ ಮಾಡಿರಬಹುದಾ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!