Wednesday, June 3, 2026
Homeಕರಾವಳಿಕರಾವಳಿಗೂ ಕಾಲಿಟ್ಟಿತಾ ಹಕ್ಕಿಜ್ವರ: ಮಂಜನಾಡಿ ಬಳಿ ಗುಂಪಾಗಿ ಕಾಗೆಗಳ ಸಾವು

ಕರಾವಳಿಗೂ ಕಾಲಿಟ್ಟಿತಾ ಹಕ್ಕಿಜ್ವರ: ಮಂಜನಾಡಿ ಬಳಿ ಗುಂಪಾಗಿ ಕಾಗೆಗಳ ಸಾವು

- Advertisement -
- Advertisement -

ಮಂಗಳೂರು : ಇಲ್ಲಿನ ಮಂಜನಾಡಿ‌ ಸಮೀಪದ ಆರಂಗಡಿ ಎಂಬಲ್ಲಿ ಕಾಗೆಗಳು ಗುಂಪಾಗಿ ಸತ್ತು ಬಿದ್ದಿದ್ದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕೇರಳಕ್ಕೆ ಹಕ್ಕಿಜ್ವರ ಕಾಲಿಟ್ಟು ಅದೇ ಕರಾವಳಿಗೂ ಹಬ್ಬಿದ್ಯಾ ಅನ್ನೋ ಆತಂಕದಲ್ಲಿದ್ದಾರೆ ಸ್ಥಳೀಯರು.

ಆರಂಗಡಿ ಪ್ರದೇಶದ ಗುಡ್ಡ ಪ್ರದೇಶದಲ್ಲಿ‌ ಸುಮಾರು 6  ಕಾಗೆಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು‌ ಗಮನಿಸಿದ್ದಾರೆ. ಒಂದೇ ಕಡೆ ಸುಮಾರು‌ ಆರು‌ ಕಾಗೆಗಳು ಸತ್ತು ಬಿದ್ದಿವೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಕೇರಳ ಭಾಗದಲ್ಲಿ ಹಲವೆಡೆ ಹಕ್ಕಿ ಜ್ಚರದ ಲಕ್ಷಣಗಳು ಕಂಡು ಬಂದಿದ್ದು, ಅದೇ ರೀತಿ ಕೇರಳ ಗಡಿ‌ ಪ್ರದೇಶವಾದ ಮಂಜನಾಡಿಯ ಅರಂಗಡಿ ಪ್ರದೇಶದಲ್ಲಿ ಇದೇ ಹಕ್ಕಿ ಜ್ವರದ ಕಾರಣದಿಂದಲೇ ಕಾಗೆಗಳು ಸತ್ತು ಬಿದ್ದಿರಬಹುದು ಎಂದು ಸ್ಥಳೀಯರು‌ ಸಂಶಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಅವರು ಭೇಟಿ‌ ನೀಡಿ‌ ಪರಿಶೀಲನೆ ನಡೆಸಿ, ಮೇಲಾಧಿಕಾರಿಗಳಿಗೆ ಮಾಹಿತಿ‌ ನೀಡಿದ್ದಾರೆ

- Advertisement -

Latest News

error: Content is protected !!