ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈಗೆ ರಕ್ತ ಅಂಟಿಕೊಂಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ
ತಮ್ಮ ಕೈಯಲ್ಲಿರುವ ರಕ್ತವನ್ನು ತೊಳೆದುಕೊಳ್ಳಲು ನೋಡುತ್ತಿದ್ದು, ಅದನ್ನು ಅಧಿಕಾರಿಗಳಿಗೆ ಅಂಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ, ಸಿದ್ದರಾಮಯ್ಯನವರೇ ನೀವು ಆರ್ ಸಿಬಿ ಸಂಭ್ರಮಾಚರಣೆಯನ್ನು ಹೆಣದ ಮೇಲೆ ನಿಂತು ಮಾಡಿದ್ದು, ಅವರು ಸತ್ತಿದ್ದಾರೆ ಅಂತಾ ಗೊತ್ತಾದ ಮೇಲೂ ನೀವು ರೆಸ್ಟೋರೆಂಟ್ ಗೆ ಹೋಗಿ ಮಸಾಲೆ ದೋಸೆ ತಿಂದಿದ್ದೀರಿ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.
ಎರಡು ಲಕ್ಷ ಜನರನ್ನು ನಿಭಾಯಿಸಲು ಆಗದ ನಿಮ್ಮ ಪ್ರಚಾರದ ಹುಚ್ಚಿಗೆ ಹನ್ನೊಂದು ಮಕ್ಕಳು ಬಲಿಯಾಗಿದ್ದಾರೆ ಎಂದೂ ಕೇಂದ್ರ ಸಚಿವೆ ಶೋಭಾ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


