Thursday, June 4, 2026
Homeಕರಾವಳಿಪುತ್ತೂರಿನಲ್ಲಿ ಪ್ರಿಯಕರನಿಂದ ಯುವತಿಯ ಕೊಲೆ ಪ್ರಕರಣ;ಮೃತ ಗೌರಿ ಮನೆಗೆ ಕೇಂದ್ರ ಸಚಿವ ಭಗವಂತ್ ಖೂಬಾ ಮತ್ತು...

ಪುತ್ತೂರಿನಲ್ಲಿ ಪ್ರಿಯಕರನಿಂದ ಯುವತಿಯ ಕೊಲೆ ಪ್ರಕರಣ;ಮೃತ ಗೌರಿ ಮನೆಗೆ ಕೇಂದ್ರ ಸಚಿವ ಭಗವಂತ್ ಖೂಬಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ.

- Advertisement -
- Advertisement -

ಬಂಟ್ವಾಳ: ಪುತ್ತೂರಿನಲ್ಲಿ ಪ್ರಿಯಕರಿನಿಂದ ಕೊಲೆಯಾದ ಯುವತಿ ಗೌರಿ ಮನೆಗೆ ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ರಾಜ್ಯ ಸಚಿವ ಭಗವಂತ್ ಖೂಬಾ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುದ್ದುಪದವಿನಲ್ಲಿರುವ ಮೃತ ಗೌರಿ ಮನೆಗೆ ಭೇಟಿ ನೀಡಿದ ಖೂಬಾ ಮನೆಯವರಿಗೆ ಸಾಂತ್ವನ ಹೇಳಿದರು.ಭಗವಂತ ಖೂಬಾ ಜೊತೆ  ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ಭೇಟಿ ನೀಡಿದ್ದರು.

ಈ ವೇಳೆ ಮಾಜಿ ಶಾಸಕರಾದ ಸಂಜೀವ ಮಠಂದೂರು ಮತ್ತು ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.‌ನಿನ್ನೆ ಪುತ್ತೂರಿನಲ್ಲಿ ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲೇ ಯುವಕ ಪದ್ಮರಾಜ್ ಗೌರಿಯನ್ನು ಚೂರಿಯಿಂದ ಇರಿದಿದ್ದನು. ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಗೌರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.

- Advertisement -

Latest News

error: Content is protected !!