Friday, June 5, 2026
Homeಕರಾವಳಿಮಂಗಳೂರು; ಒಂಟಿ ವೃದ್ಧೆಯಿದ್ದ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಅಪರಿಚಿತ ಮಹಿಳೆ

ಮಂಗಳೂರು; ಒಂಟಿ ವೃದ್ಧೆಯಿದ್ದ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಅಪರಿಚಿತ ಮಹಿಳೆ

- Advertisement -
- Advertisement -

ಮಂಗಳೂರು; ಅಪರಿಚಿತ ಮಹಿಳೆಯೊಬ್ಬಳು ಒಂಟಿ ವೃದ್ಧೆಯಿದ್ದ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಘಟನೆ ಘಟನೆ ಕುಂಪಲ ಮೂರುಕಟ್ಟೆ ಒಂದನೇ ಅಡ್ಡ ರಸ್ತೆಯ ಮಿತ್ರನಗರ ಎಂಬಲ್ಲಿ ನಡೆದಿದೆ.

ಒಂಟಿಯಾಗಿ ವಾಸಿಸುತ್ತಿದ್ದ ಸುಶೀಲಾ (76) ಎಂಬವರ ಮನೆಗೆ ನುಗ್ಗಿದ ಅಪರಿಚಿತ ಮಹಿಳೆ ಮುಖಕ್ಕೆ ದಿಂಬನ್ನು ಅದುಮಿ ಸುಶೀಲಾ ಅವರ ಕತ್ತಲ್ಲಿದ್ದ 22 ಗ್ರಾಮ್‌ ತೂಕದ ಚಿನ್ನದ ಸರ ದರೋಡೆ ಮಾಡಿದ್ದಾಳೆ ಎನ್ನಲಾಗಿದೆ. ದರೋಡೆಗೈದ ಆಗಂತುಕೆ ಬಾಗಿಲಿನಿಂದ ಹೊರ ಓಡಿದಾಗ ಸುಶೀಲಾ ಅವರು ಮಹಿಳೆ ಚೂಡಿದಾರ್‌ ಧರಿಸಿರುವುದನ್ನು ಗಮನಿಸಿದ್ದಾರೆ.

ಘಟನ ಸ್ಥಳಕ್ಕೆ ಉಳ್ಳಾಲ ಪೊಲೀಸ್‌ ಠಾಣಾ ನಿರೀಕ್ಷಕ ಸಂದೀಪ್‌, ಉಪ ನಿರೀಕ್ಷಕ ಶೀತಲ್‌ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಹಿಂದೆಯೂ ಸುಶೀಲಾ ಅವರ ಎರಡು ಚಿನ್ನದ ಬಳೆಗಳು ಕಳವಾಗಿದ್ದು, ಪೊಲೀಸ್‌ ದೂರು ನೀಡಿರಲಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!