Saturday, June 1, 2024
Homeತಾಜಾ ಸುದ್ದಿ"ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿಗೆ- ಕೊವಿಡ್ 19ಸೋಂಕು ದೃಢ"

“ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿಗೆ- ಕೊವಿಡ್ 19ಸೋಂಕು ದೃಢ”

spot_img
- Advertisement -
- Advertisement -

ನವದೆಹಲಿ: ಕೊವಿಡ್ 19ಸೋಂಕು ಹೆಚ್ಚಾಗುತ್ತಿರುವುದರ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರಿಗೆ ಕೊವಿಡ್ 19ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಂತೆ ಉಮಾಭಾರತಿ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ, ”ನಾನು ವಂದೇ ಮಾತರಂ ಕುಂಜ್ ನಲ್ಲಿ ಕ್ವಾರಂಟೈನ್ ನಲ್ಲಿದ್ದೇನೆ. ಹರಿದ್ವಾರ ಹಾಗೂ ಋಷಿಕೇಶದ ನಡುವೆ ಇರುವ ತಾಣ ಇದಾಗಿದೆ. ಇನ್ನು ನಾಲ್ಕು ದಿನಗಳ ನಂತರ ಮತ್ತೊಮ್ಮೆ ಕೊವಿಡ್ 19 ಪರೀಕ್ಷೆಗೆ ಒಳಪಡುತ್ತೇನೆ. ಪರಿಸ್ಥಿತಿ ಹೀಗೆ ಮುಂದುವರೆದರೆ ವೈದ್ಯರ ಸಲಹೆಯಂತೆ ಮುಂದುವರೆಯುತ್ತೇನೆ” ಎಂಬರ್ಥದಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದ ಉಮಾಭಾರತಿ ಅವರಿಗೆ ಸ್ವಲ್ಪ ಮಟ್ಟಿನ ಜ್ವರ ಕಾಣಿಸಿಕೊಂಡಿದೆ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೊವಿಡ್ ವಿರುದ್ಧ ಸುರಕ್ಷಿತಾ ಕ್ರಮಗಳನ್ನು ಅನುಸರಿಸುತ್ತಾ ಬಂದಿದ್ದರು. ಶನಿವಾರದಂದು ಕೊವಿಡ್ 19 ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಪಾಸಿಟಿವ್ ಎಂದು ವರದಿ ಬಂದಿದೆ.

- Advertisement -
spot_img

Latest News

error: Content is protected !!