- Advertisement -
![]()
- Advertisement -
ಬೆಳ್ತಂಗಡಿ ; ಉಜಿರೆಯ ಧರ್ಮಸ್ಥಳ ಕ್ರೀಡಾ ವಸತಿ ನಿಲಯದಿಂದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಕ್ರೀಡಾ ವಸತಿ ನಿಲಯದ ವಾರ್ಡನ್ ಮೋಹಿನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಿವ್ಯಾ ನಾಪತ್ತೆಯಾದ ವಿದ್ಯಾರ್ಥಿನಿ. ಶ್ರೀ ಧರ್ಮಸ್ಥಳ ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹಾಸನ ಜಿಲ್ಲೆ ಬೇಲೂರಿನ ದಿವ್ಯಾ ದಿನಾಂಕ: 29.05.2024 ರಂದು ಬೆಳೆಗ್ಗೆ 08.00 ಗಂಟೆ ಸಮಯಕ್ಕೆ ಕ್ರೀಡಾಂಗಣಕ್ಕೆ ಹೋಗಿ ಬರುತ್ತೇನೆ ಎಂದು ವಾರ್ಡನ್ ಬಳಿ ಅನುಮತಿ ಪಡೆದುಕೊಂಡು ಹೋದವಳು, ಹಾಸ್ಟೆಲ್ ಗೂ ವಾಪಸ್ಸು ಬಾರದೇ, ಕಾಲೇಜಿಗೂ ಹೋಗದೇ, ಮನೆಗೂ ಹೋಗದೇ ಕಾಣೆಯಾಗಿದ್ದು, ಕ್ರೀಡಾಂಗಣ, ಕಾಲೇಜು ವಠಾರ, ಪೋಷಕರಲ್ಲಿ ಹಾಗೂ ಆಕೆಯ ಸ್ನೇಹಿತರನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
- Advertisement -


