- Advertisement -
![]()
- Advertisement -
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ವಿದ್ಯಾರ್ಥಿನಿಯೊಬ್ಬಳು ಮನೆ ಮುಂದೆ ನಿಂತುಕೊಂಡಿದ್ದ ವೇಳೆ ವಿದ್ಯಾರ್ಥಿನಿಯ ಮೇಲೆ BSNL ಟವರ್ ರಾಡ್ ಕಳಚಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ವಿದ್ಯಾರ್ಥಿನಿ ಸುಮಾ ಮಲ್ಕಂಡಿ (19) ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ವಿದ್ಯಾರ್ಥಿನಿ ಸುಮಾ ಮಲ್ಕಂಡಿ ಮನೆ ಮುಂದೆ ನಿಂತಿದ್ದಾಗ ನಿಷ್ಕ್ರಿಯಗೊಂಡಿದ್ದ 120 ಅಡಿ ಎತ್ತರದ ಟವರ್‌ನ ರಾಡ್ ಏಕಾಏಕಿ ಕಳಚಿ ಬಿದ್ದಿದ್ದು, ಇದರ ಪರಿಣಾಮ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. BSNL ಅಧಿಕಾರಿಗಳು ನಿಷ್ಕ್ರಿಯಗೊಂಡಿದ್ದ ಟವರ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆಗೆ ಸಂಬಂಧ BSNL DM ಫಣಿಪ್ರಸಾದ್, DGM ಅನಂತರಾಮ ಚೌಧರಿ, AGM ಗಿರೀಶ್ ಮೂಲಭಾರತಿ, GTO ಮಹ್ಮದ್ ಜಾಫರ್ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ತಿಳಿದು ಬಂದಿದೆ.
- Advertisement -


