Sunday, April 28, 2024
Homeಕರಾವಳಿಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ "ಕನಸಿನ ಮನೆ" ಇಂದು ಶುಭಾರಂಭ

ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ಇಂದು ಶುಭಾರಂಭ

spot_img
- Advertisement -
- Advertisement -

ಬೆಳ್ತಂಗಡಿ : ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಿರುವ ಕನಸಿನ ಮನೆ ಪ್ರಾರಂಭೋತ್ಸವವು ಇಂದು ಜರುಗಿತು.

ಮರಕ್ಕೆ ಪರ್ಯಾಯವಾಗಿ ತಯಾರಿಸಲಾದ ಕಟ್ಟಡ ಸಾಮಾಗ್ರಿಗಳನ್ನು ಜನತೆಗೆ ಪರಿಚಯಿಸಿ, ಜನರ ವಿಶ್ವಾಸವನ್ನು ಪಡೆದ ಸಂಸ್ಥೆ ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ನ ಸಾಧನೆಯ ಹಿರಿಮೆಗೆ ಮತ್ತೊಂದು ಗರಿ ಎಂಬಂತೆ ಇದೀಗ ಕನಸಿನ ಮನೆ ಶುಭಾರಂಭವಾಗಿದೆ.

ಆಕರ್ಷಕ ವಿನ್ಯಾಸ ಹಾಗೇ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಿರುವ ಸಿಮೆಂಟ್- ಫೈಬರ್, ಸ್ಟೀಲ್ ದಾರಂದ, ಕಿಟಕಿ ಫ್ರೇಮ್, ಬಾಗಿಲು ಹಾಗೂ ಇನ್ನಿತರ ಪರಿಕರಗಳನ್ನು ಹೊಂದಿರುವ ಲಕ್ಷ್ಮಿ ಇಂಡಸ್ಟ್ರೀಸ್ ಹೊಸ ಕನಸಿನ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರವರು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಯು. ಶರತ್ ಕೃಷ್ಣ ಪಡ್ವೆಟ್ನಾಯ, ಬರೋಡ ಉದ್ಯಮಿ ಶಶಿಧರ ಶೆಟ್ಟಿ, ಉಜಿರೆಯ ಉದ್ಯಮಿ ಮೋಹನ್ ಶೆಟ್ಟಿಗಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕ ಹಾಗೂ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಮತ್ತು ರೇಶ್ಮಾ ಮೋಹನ್ ದಂಪತಿ , ಮಕ್ಕಳಾದ ಮೌಲ್ಯ ಲಕ್ಷ್ಮೀ, ಮಾನ್ವಿ ಲಕ್ಷ್ಮೀ, ರಾಜಲಕ್ಷ್ಮೀ ಹಾಗೂ ಮಾಲಕರ ಮಾತೃಶ್ರೀ  ಲೀಲಾವತಿ ಮತ್ತು ಮಕ್ಕಳು, ಬಂಧುವರ್ಗದವರು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

- Advertisement -
spot_img

Latest News

error: Content is protected !!