Monday, May 6, 2024
Homeಕರಾವಳಿಮಂಗಳೂರು: ಡ್ರಗ್ಸ್ ಮತ್ತು ಸೆಕ್ಸ್ ಗೆ ಕ್ರೈಸ್ತ ಯುವತಿ ಬಲಿ, ಮಗಳ ರಕ್ಷಣೆಗೆ ತಾಯಿಯಿಂದ ವಿಶ್ವ...

ಮಂಗಳೂರು: ಡ್ರಗ್ಸ್ ಮತ್ತು ಸೆಕ್ಸ್ ಗೆ ಕ್ರೈಸ್ತ ಯುವತಿ ಬಲಿ, ಮಗಳ ರಕ್ಷಣೆಗೆ ತಾಯಿಯಿಂದ ವಿಶ್ವ ಹಿಂದೂ ಪರಿಷತ್ ಗೆ ಮನವಿ

spot_img
- Advertisement -
- Advertisement -

ಮಂಗಳೂರು: ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ಡ್ರಗ್ಸ್ ಕೊಟ್ಟು ಲೈಂಗಿಕವಾಗಿ ದುರ್ಬಳಕೆ ಮಾಡುತ್ತಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಕುರಿತು ನೊಂದ ಹುಡುಗಿಯ ತಾಯಿ ಮಂಗಳೂರಿನ ವಿಶ್ವ ಹಿಂದು ಪರಿಷತ್ ಮುಖಂಡರಿಗೆ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಕಾಟಿಪಳ್ಳದ ಕೃಷ್ಣಾಪುರ ನಿವಾಸಿ ಮಹಮ್ಮದ್ ಶರೀಫ್ ಸಿದ್ದಿಕ್ ಎಂಬಾತ ಮೂರು ವರ್ಷಗಳಿಂದ ದುರುಪಯೋಗ ಮಾಡುತ್ತಿದ್ದಾನೆ ಎಂದು ದೂರಲಾಗಿದೆ.‌ ಯುವತಿ ಮಂಗಳೂರಿನ ಬಿಜೈ ನಿವಾಸಿ. ಸಿದ್ದಿಕ್ ಮಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಆಗಿದ್ದು ಹಲವಾರು ಕೇಸುಗಳು ಕೂಡ ಇವನ ಮೇಲಿದೆ.

ಯುವತಿ ಅಲೋಶಿಯಸ್ ಕಾಲೇಜಿನಲ್ಲಿ ಕಾಲೇಜು ಮುಗಿಸಿದ್ದು ಅಲ್ಲಿಯೇ ಡ್ರಗ್ಸ್ ಚಟ ಶುರುಮಾಡಿಕೊಂಡಿದ್ದಳು.‌ ಆನಂತರ ಡ್ರಗ್ಸ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದಳು. ನಡುರಾತ್ರಿಯಲ್ಲಿ ಬೈಕಿನಲ್ಲಿ ಬರುವ ಯುವಕರು ಯುವತಿಯನ್ನು ಕರೆದೊಯ್ಯುತ್ತಿದ್ದು ಆ ಬಳಿಕ ಹಲವು ದಿನಗಳ ಕಾಲ ಇಟ್ಟುಕೊಳ್ಳುತ್ತಿದ್ದರು. ಮಗಳು ಎಲ್ಲಿದ್ದಾಳೆ ಎನ್ನುವುದು ತಿಳಿಯದೆ ಹೆತ್ತವರು ಆತಂಕಕ್ಕೆ ಒಳಗಾಗುತ್ತಿದ್ದರು.‌ ಮಗಳ ಈ ರೀತಿ ಆದ ಬಳಿಕ ತೀವ್ರ ಬೇಸತ್ತಿದ್ದ ತಂದೆ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು.

ಸಿದ್ದಿಕ್ ಈಕೆಯನ್ನು ಮದುವೆಯಾಗುವುದಾಗಿ ಹೇಳುತ್ತಿದ್ದು ಅದೇ ಭ್ರಮೆಯಲ್ಲಿ ಆತನ ಜೊತೆ ತಿರುಗಾಡುತ್ತಿದ್ದಾಳೆ. ಈ ಬಗ್ಗೆ ಯುವತಿಯ ತಾಯಿ ಕ್ರಿಸ್ತಿಯನ್ ಧರ್ಮಗುರುಗಳಿಗೂ ದೂರು ನೀಡಿದ್ದಾರೆ.‌ ಅಲ್ಲದೆ, ಉರ್ವಾ ಠಾಣೆಯಲ್ಲಿ ದೂರನ್ನೂ ನೀಡಿದ್ದಾರೆ.

ಆದರೆ ಮಹಮ್ಮದ್ ಸಿದ್ದಿಕ್ ಗೆ ಎರಡು- ಮೂರು ಮದುವೆಯಾಗಿದೆ ಎನ್ನುವ ಮಾಹಿತಿಗಳಿವೆ. ಅಲ್ಲದೆ, ಮಂಗಳೂರು ಮತ್ತು ಕೊಡಗಿನಲ್ಲಿ ಡ್ರಗ್ಸ್ ಪೂರೈಸುತ್ತಿರುವ ವಹಿವಾಟು ನಡೆಸುತ್ತಿದ್ದಾನೆ ಎಂದು ವಿಶ್ವ ಹಿಂದು ಪರಿಷತ್ ನಾಯಕರು ಆರೋಪಿಸಿದ್ದಾರೆ. ವಿಹಿಂಪ ನಾಯಕ ಶರಣ್ ಪಂಪ್ವೆಲ್ ಈ ಕೂಡಲೇ ಆರೋಪಿಯನ್ನು ಬಂಧಿಸಿ, ಡ್ರಗ್ಸ್ ಸೆಕ್ಸ್ ಜಿಹಾದಿಗೆ ಬಲಿಯಾಗಿರುವ ಯುವತಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!