Wednesday, June 24, 2026
Homeಕರಾವಳಿಮಂಗಳೂರು ಸುರತ್ಕಲ್ ಕಾಲೇಜು ವಿದ್ಯಾರ್ಥಿ ಸಾಲ ಹಾಗೂ ಉದ್ಯೋಗದ ಭಯದಲ್ಲಿ ನೇಣಿಗೆ ಶರಣು !

ಮಂಗಳೂರು ಸುರತ್ಕಲ್ ಕಾಲೇಜು ವಿದ್ಯಾರ್ಥಿ ಸಾಲ ಹಾಗೂ ಉದ್ಯೋಗದ ಭಯದಲ್ಲಿ ನೇಣಿಗೆ ಶರಣು !

- Advertisement -
- Advertisement -

ಸುರತ್ಕಲ್: ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ ಬಿಹಾರ, ಪಾಟ್ನಾ ನಗರದ ಸೌರವ್‌ (19), ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಸುರತ್ಕಲ್‌ ಎನ್‌ಐಟಿಕೆಯಲ್ಲಿ ನಡೆದಿದೆ.

ಸೌರವ್‌ ಡೆತ್‌ನೋಟ್‌ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಶೈಕ್ಷಣಿಕ ಸಾಲ ಪಡೆದು ಬಿಇ ವ್ಯಾಸಂಗ ಮಾಡುತ್ತಿದ್ದ. ಓದು ಮುಗಿಯುವವರೆಗೆ ಸಾಲ ಹೆಚ್ಚಾಗುವ ಭಯ ಹಾಗೂ ಉದ್ಯೋಗ ಸಿಗದೇ ಇದ್ದರೆ ಹೇಗೆ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನನ್ನ ಸಾವಿಗೆ ಯಾರೂ ಕೂಡ ಕಾರಣರಲ್ಲ ಎಂದು ಡೆತ್ ನೋಟಲ್ಲಿ ಉಲ್ಲೇಖ ಮಾಡಿದ್ದಾನೆ. ಈ ಕುರಿತು ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!