ಉಡುಪಿ ; ಇನ್ ಸ್ಟಾಗ್ರಾಂ ಜಾಹೀರಾತು ನಂಬಿ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.
ಹಿರಿಯಡ್ಕ ನಿವಾಸಿ ಭಾರತಿ ಎಂಬವರು ವರ್ಕ್ ಫ್ರಮ್ ಹೋ ಕೆಲಸದ ಹುಡುಕಾಟದಲ್ಲಿದ್ದರು. ಇದೇ ವೇಳೆ ಇನ್ ಸ್ಟಾಗ್ರಾಂ ನಲ್ಲಿ ಮನೆಯಲ್ಲಿ ಕೆಲಸ ಮಾಡಬಹುದಾದ ಜಾಹೀರಾತನ್ನು ನೋಡಿ ಅದನ್ನು ಕ್ಲಿಕ್ ಮಾಡಿದ್ದಾರೆ. ಆಗ ನಿಶಾ ಎಂಬುವವರ ಪರಿಚಯವಾಗಿ ಅವರು ಫ್ಲಿಫ್ ಕಾರ್ಟ್ ಟ್ರೇಡರ್ ಗಳೊಂದಿಗೆ ಸಹಕರಿಸಿ ಅವರ ಪ್ರಾಡಕ್ಟ್ ಗಳ ರೇಟಿಂಗ್ ಹೆಚ್ಚು ಮಾಡುವ ಕೆಲಸ ಮಾಡಬೇಕು ಆಗ ನಿಮಗೆ 20-30% ಕಮೀಷನ್ ಕೊಡುವುದಾಗಿ ತಿಳಿಸಿದ್ದಾರೆ. ಈ ಕೆಲಸಕ್ಕೆ ಸೇರಲು ನೊಂದಾಯಿಸಿಕೊಳ್ಳುವ ಬಗ್ಗೆ ಭಾರತಿ ಅವರ ಮೋಬೈಲ್ ಗೆ ಲಿಂಕ್ ನ್ನು ಕಳುಹಿಸಿಕೊಟ್ಟು UPI ಮುಖಾಂತರ 200/- ರೂಪಾಯಿ ಪಾವತಿ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ದಿನಾಂಕ 15/06/2025 ರಿಂದ 200/- ರೂಪಾಯಿಯನ್ನು UPI ಮುಖಾಂತರ ಪಾವತಿ ಮಾಡಿದಾಗ ನೀರಜ್ ಕುಮಾರ ಸಿಂಗ್ ಎಂದು ಹೆಸರು ಬಂದಿರುತ್ತದೆ. ನಂತರ ಟ್ಯೂಟರ್ ವೈಶಾಲಿ ರಾಜ್ ರವರ ಲಿಂಕ್ ನೀಡಿದ್ದು ಲಿಂಕ್ ನ್ನು ಕ್ಲಿಕ್ ಮಾಡಿದಾಗ ಭಾರತಿಯವರಿಗೆ ಒಂದು ಟಾಸ್ಕ್ ನೀಡಿದ್ದಾರೆ. ಟಾಸ್ಕ್ ಮುಗಿದ ಬಳಿಕ ಭಾರತೀಯವರ ಖಾತೆಗೆ 300/- ರೂಪಾಯಿ ಬಂದಿದೆ. ನಂತರ ವೈಶಾಲಿ ರಾಜ್ ರವರು VIP investment members only group ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಕಳುಹಿಸಿದ ಲಿಂಕ್ ನ್ನು ಕ್ಲಿಕ್ಕಿಸಿದಾಗ ಇನ್ವೆಸ್ಟ್ ಮೆಂಟ್ ಮತ್ತು ಕಮೀಷನ್ ಪಟ್ಟಿ ಇರುತ್ತದೆ. ಪಟ್ಟಿ ಅನುಸಾರ ಭಾರತಿಯವರು 20,000/- ರೂಪಾಯಿಯನ್ನು ಹಾಕಿದ್ದಾರೆ. ನಂತರ ಅವರು ನೀಡಿದ ಟಾಸ್ಕ್ ನ್ನು ಮಾಡಿದ ಬಳಿಕ 40,000/- ರೂಪಾಯಿ ಹಣವನ್ನು ಹಾಕಿದರೆ ಮಾತ್ರ ನಿಮ್ಮ ಪಾಲಿನ ಹಣ ತೆಗೆಯಬಹುದು ಎಂಬುದಾಗಿ ಭಾರತಿಯವರಿಗೆ ಹೇಳಿದ್ದಾರೆ.ಬಳಿಕ ಅವರಿಂದ ಹಂತ ಹಂತವಾಗಿ ವಿವಿಧ ಲಿಂಕ್ ಮತ್ತು ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 5,62,800/- ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುತ್ತಾರೆ. ಆದರೂ ಪಿರ್ಯಾದಿದಾರರಿಗೆ ಹಣವನ್ನು ವಾಪಾಸು ನೀಡದೇ ಇನ್ನು ಹಣ ಪಾವತಿಸುವಂತೆ ಪಿರ್ಯಾದಿದಾರರ ಮೊಬೈಲ್ಗೆ ಮೆಸೇಜ್ ಕಳುಹಿಸಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2025 ಕಲಂ:66(D)IT ACT ರಂತೆ ಪ್ರಕರಣ ದಾಖಲಾಗಿರುತ್ತದೆ