Wednesday, June 3, 2026
Homeಕರಾವಳಿಉಡುಪಿಉಡುಪಿ, ಶಿವಮೊಗ್ಗ ಸಹಿತ 6 ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ಸರಕಾರದ ಪರಿಷ್ಕೃತ ಆದೇಶ..

ಉಡುಪಿ, ಶಿವಮೊಗ್ಗ ಸಹಿತ 6 ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ಸರಕಾರದ ಪರಿಷ್ಕೃತ ಆದೇಶ..

- Advertisement -
- Advertisement -

ಉಡುಪಿ: ಪಾಸಿಟಿವಿಟಿ ರೇಟ್ ಇಳಿಕೆ ಆಧಾರದಲ್ಲಿ ಉಡುಪಿ ಜಿಲ್ಲೆ ಸಹಿತ ಆರು ಜಿಲ್ಲೆಗಳನ್ನು ಅನ್ ಲಾಕ್ ಪಟ್ಟಿಗೆ ಸೇರಿಸಿ ರಾಜ್ಯ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ.ಉಡುಪಿ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರದಲ್ಲಿ ಲಾಕ್ಡೌನ್ ರಿಲ್ಯಾಕ್ಸ್ ನೀಡಲಾಗಿದೆ.

ಶನಿವಾರ ಸಂಜೆಯ ಸರಕಾರದ ಆದೇಶಕ್ಕೆ ಅನ್ವಯವಾಗುವಂತೆಯೇ ಹೊಸದಾಗಿ ಆ ಪಟ್ಟಿಗೆ ಸೇರಿಸಿದ ಈ ಜಿಲ್ಲೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5ರವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಉಡುಪಿ‌ ಜಿಲ್ಲೆ ಅನ್ ಲಾಕ್ ಮಾಡಲು ಉಡುಪಿ ಶಾಸಕ ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಭಾನುವಾರವಷ್ಟೆ ದಾರವಾಡ ಜಿಲ್ಲೆ ಅನ್ ಲಾಕ್ ಆಗಿತ್ತು.

- Advertisement -

Latest News

error: Content is protected !!