Wednesday, June 3, 2026
Homeಕರಾವಳಿಉಡುಪಿಗೋಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು ಬೇಗ ಜಾರಿಯಾಗಲಿ: ಸಿಎಂಗೆ ಪೇಜಾವರ ಶ್ರೀ ಪತ್ರ

ಗೋಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು ಬೇಗ ಜಾರಿಯಾಗಲಿ: ಸಿಎಂಗೆ ಪೇಜಾವರ ಶ್ರೀ ಪತ್ರ

- Advertisement -
- Advertisement -

ಉಡುಪಿ: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆಯ ತಡೆಗೆ ಪ್ರಬಲ ಕಾನೂನು ಜಾರಿ ಮಾಡಿ ಎಂದು ಆಗ್ರಹಿಸಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ನಮ್ಮ ರಾಜ್ಯದಲ್ಲಿ, ಪರಿಸರದಲ್ಲಿ ಗೋಹತ್ಯೆ, ಕಳ್ಳತನ, ಹಿಂಸಾತ್ಮಕ ಸಾಗಣೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಪ್ರಬಲ ಕಾನೂನು ಬೇಕು. ಪ್ರಸಕ್ತ ಅಧಿವೇಶನದಲ್ಲಿಯೇ ಅದನ್ನು ಮಂಡಿಸಿ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

ಗೋ ವಂಶದ ಹತ್ಯೆ ತಡೆಗಟ್ಟಲು, ಗೋವಿನ ಸಂತತಿಯನ್ನು ಉಳಿಸಲು ಸರ್ಕಾರ ಮುಂದಾಗಬೇಕು. ಈ ಮೂಲಕ ನಾಡಿನ ಸಮಸ್ತ ಗೋಪ್ರೇಮಿಗಳು, ಪಶುಪ್ರೇಮಿಗಳ ಆಗ್ರಹವನ್ನು ಮನ್ನಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

- Advertisement -

Latest News

error: Content is protected !!