Wednesday, June 3, 2026
Homeಕರಾವಳಿಉಡುಪಿಉಡುಪಿ ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್ ಮೇಲೆ ಹಲ್ಲೆ: ಕೊಲೆ ಬೆದರಿಕೆ !

ಉಡುಪಿ ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್ ಮೇಲೆ ಹಲ್ಲೆ: ಕೊಲೆ ಬೆದರಿಕೆ !

- Advertisement -
- Advertisement -

ಪರ್ಕಳ ಮುಖ್ಯರಸ್ತೆಯಲ್ಲಿ 2 ವಾಹನ ಸವಾರರ ನಡುವೆ ಮಾತಿನಚಕಮಕಿ ನಡೆಯುತ್ತಿತ್ತು. ಈ ಸಂದರ್ಭ ಅದೇ ರಸ್ತೆಯಲ್ಲಿ ಬೈಕ್ನಲ್ಲಿ ಮಣಿಪಾಲದ ಕಡೆ ಬರುತ್ತಿದ್ದ ನಗರಸಭಾ ಸದಸ್ಯ ಯೋಗೇಶ್ ಸಾಲ್ಯಾನ್ ಕಾರು ಚಾಲಕನಿಗೆ ಬುದ್ಧಿ ಹೇಳಲು ತಮ್ಮ ಬೈಕ್ ನಿಂದ ಇಳಿದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತಳ್ಳಾಟ ಕೂಡ ನಡೆದಿತ್ತು.

ಬಳಿಕ ನಗರಸಭಾ ಸದಸ್ಯ ಅಲ್ಲಿಂದ ಹೊರಟಾಗ ಆತ್ರಾಡಿ ನಿವಾಸಿ ಹರ್ಷದ್ ಸೇರಿ ಎಂಐಟಿ ಬಳಿ ಎಂಟಕ್ಕೂ ಹೆಚ್ಚು ಜನ ಯೋಗೀಶ್ ಸಾಲ್ಯಾನ್ ಅವರಿಗೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಕೊಲೆ ಬೆದರಿಕೆ ಕೂಡ ನೀಡಿದ್ದಾರೆ.

ಇನ್ನೊಂದೆಡೆ ಕಾರಿನಲ್ಲಿದ್ದ ಯುವಕ ಅರ್ಷದ್ ಯೋಗೇಶ್ ಸಾಲ್ಯಾನ್ ವಿರುದ್ಧ ದೂರ ನೀಡಿದ್ದಾರೆ. ಯೋಗೀಷ್ ಸಾಲ್ಯಾನ್ ಅವರು ಪರಿಸ್ಥಿತಿ ತಿಳಿಗೊಳಿಸಲು ಹೋಗಿ ಹೀಗಾಯಿತು ಎಂಬುದು ತಿಳಿದುಬಂದಿದೆ.

- Advertisement -

Latest News

error: Content is protected !!