Saturday, May 4, 2024
Homeಕರಾವಳಿಮಂಗಳೂರು: ರ್ಯಾಗಿಂಗ್ ಮಾಡಿದ ಒಂಬತ್ತು ವಿದ್ಯಾರ್ಥಿಗಳ ಬಂಧನ, ಏಳು ಮಂದಿ ಗಾಂಜಾ ಸೇವನೆ ದೃಢ !

ಮಂಗಳೂರು: ರ್ಯಾಗಿಂಗ್ ಮಾಡಿದ ಒಂಬತ್ತು ವಿದ್ಯಾರ್ಥಿಗಳ ಬಂಧನ, ಏಳು ಮಂದಿ ಗಾಂಜಾ ಸೇವನೆ ದೃಢ !

spot_img
- Advertisement -
- Advertisement -

ತಮ್ಮ ಜೂನಿಯರ್‌ಗಳಿಗೆ ರ್ಯಾಗಿಂಗ್ ಮಾಡಿದ ಆರೋಪದ ಮೇಲೆ ವಿವಿಧ ಖಾಸಗಿ ಕಾಲೇಜುಗಳ ಒಂಬತ್ತು ವಿದ್ಯಾರ್ಥಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಒಂಬತ್ತು ಆರೋಪಿಗಳು ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಆರೋಗ್ಯ ವಿಜ್ಞಾನ ಕೋರ್ಸ್ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅತ್ತಾವರದ ಫ್ಲಾಟ್‌ನಲ್ಲಿ ಸಂತ್ರಸ್ತರನ್ನು ರ್ಯಾಗಿಂಗ್ ಮಾಡಲಾಗಿದೆ.

ಆರೋಪಿಗಳು ಅವರ ಖಾತೆಯಿಂದ ಹಣವನ್ನು ಇವರ ಖಾತೆಗೆ ವರ್ಗಾಯಿಸಿದ್ದಾರೆ ಮತ್ತು ಬರಿ ಕೈ ಮತ್ತು ಹೆಲ್ಮೆಟ್‌ನಿಂದ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 342, 323, 324, 386 ಮತ್ತು 149 ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆಯ ಕಲಂ 116 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಂಬತ್ತು ವಿದ್ಯಾರ್ಥಿಗಳಲ್ಲಿ ಏಳು ಮಂದಿ ಮಾದಕ ದ್ರವ್ಯ ಸೇವಿಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 7 ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಇವರೆಲ್ಲರೂ ಕೇರಳೀಯರು.

ಇಡುಕ್ಕಿ ಜಿಲ್ಲೆಯ ನಂದಾ ಶ್ರೀಕುಮಾರ್ (19) ಮತ್ತು ಅಲನ್ ಶೈಜು (19), ಕಾಸರಗೋಡು ಚೆರ್ವತ್ತೂರಿನ ನಿವಾಸಿ ಶಿಹಾಸ್ ಸಿಕೆಪಿ (20), ಪ್ರವೇಶ್ ಕೆಪಿ (21) ಗೋಪಿ ಕೃಷ್ಣ ಎಚ್ (21), ಹಸನ್ ಪಿಎಸ್ (21) ಮತ್ತು ವಿಷ್ಣು ಪಿಆರ್ (22), ಎಲ್ಲರೂ ತ್ರಿಶೂರ್ ನವರು.

ರ್ಯಾಗಿಂಗ್ ಪ್ರಕರಣದ ಜೊತೆಗೆ, ಎಲ್ಲಾ ಏಳು ಮಂದಿಯನ್ನು 27 (NDPS) ಕಾಯಿದೆ 1985 ರ ಅಡಿಯಲ್ಲಿಯೂ ದಾಖಲಿಸಲಾಗಿದೆ.

ಜಸಿಲ್ ಮೊಹಮ್ಮದ್ ಮತ್ತು ಅಭಿ ಅಲೆಕ್ಸ್ ಎಂದು ಗುರುತಿಸಲಾದ ಇತರ ಇಬ್ಬರು ವಿದ್ಯಾರ್ಥಿಗಳ ಮೇಲೆ ರ ರ್ಯಾಗಿಂಗ್ ಪ್ರಕರಣ ದಾಖಲಾಗಿದೆ ಆದರೆ ಡ್ರಗ್ಸ್ ಸೇವಿಸಿದ್ದು ಪತ್ತೆಯಾಗಿರಲಿಲ್ಲ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

- Advertisement -
spot_img

Latest News

error: Content is protected !!