Thursday, June 4, 2026
Homeಕರಾವಳಿಪುತ್ತೂರಿನ ಬನ್ನೂರು ನಿವಾಸಿ, ದೈವ ಸೇವೆಯ ಮಧ್ಯಸ್ಥ ಭಾರತ್ ಭಂಡಾರಿ ಇನ್ನಿಲ್ಲ !

ಪುತ್ತೂರಿನ ಬನ್ನೂರು ನಿವಾಸಿ, ದೈವ ಸೇವೆಯ ಮಧ್ಯಸ್ಥ ಭಾರತ್ ಭಂಡಾರಿ ಇನ್ನಿಲ್ಲ !

- Advertisement -
- Advertisement -

ಪುತ್ತೂರಿನ ಬನ್ನೂರು ನಿವಾಸಿ, ದೈವ ಸೇವೆಯಲ್ಲಿ ಮಧ್ಯಸ್ಥರಾಗಿ ಸೇವೆ ಮಾಡುತ್ತಿದ್ದ ಭರತ್ ಭಂಡಾರಿ ಅನಾರೋಗ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರಿಗೆ ಜಾಂಡೀಸ್ ಕಾಯಿಲೆ ತೀವ್ರವಾಗಿತ್ತು. ಹಾಗೆ ಪಿತ್ತಕೋಶ ಸಂಪೂರ್ಣವಾಗಿ ಕೆಟ್ಟುಹೋದ ಕಾರಣ 120 ಕೆಜಿ ತೂಕದ ದೃಢ ಶರೀರದ ಭರತ್ ಅವರು 40 ಕೆಜಿಗೆ ಇಳಿದಿದ್ದರು. ದೇಹದ ಸ್ಥಿತಿ ತುಂಬಾ ಕ್ಷೀಣಿಸುತ್ತಾ ಬಂದಿತ್ತು. ಲಿವರ್ ಮರುಜೋಡಣೆ ಮಾಡಬೇಕೆಂದು ಡಾಕ್ಟರ್ ತಿಳಿಸಿದ್ದರು.

ಹಾಗಾಗಿ ಅವರ ಅಭಿಮಾನಿಗಳು, ಹಿತೈಷಿಗಳು ಚಿಕಿತ್ಸೆಯ ವೆಚ್ಚಕ್ಕಾಗಿ ಹಣ ಸಂಗ್ರಹ ಮಾಡಲು ಮನ ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಹೆಸರಾಂತ ಯಕ್ಷಗಾನ ಕಲಾವಿದರಾದ ಗಂಗಾಧರ ಭಂಡಾರಿಯವರ ಪುತ್ರ ಭರತ್ ಭಂಡಾರಿ ಅವರು ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥರಾಗಿ ತೊಡಗಿಸಿಕೊಂಡು ಎಲ್ಲರಿಗೂ ಪರಿಚಿತರಾಗಿದ್ದರು. ವಿಧಿಯಾಟ ಇಂದು ಕೊನೆ ಉಸಿರೆಳೆದಿದ್ದರೆ.

ಮೃತರು ತಂದೆ ಗಂಗಾಧರ ಭಂಡಾರಿ, ತಾಯಿ ಪುಷ್ಪ, ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!