Sunday, April 28, 2024
Homeಕರಾವಳಿಉಡುಪಿಹಡಿಲು ಭೂಮಿ ಕೃಷಿ, ಸಂಪೂರ್ಣ ಸಾವಯುವ ಕುಚ್ಚಲಕ್ಕಿ "ಉಡುಪಿ ಕೇದಾರ ಕಜೆ " ಶೀಘ್ರದಲ್ಲಿ ಮಾರುಕಟ್ಟೆಗೆ...

ಹಡಿಲು ಭೂಮಿ ಕೃಷಿ, ಸಂಪೂರ್ಣ ಸಾವಯುವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ ” ಶೀಘ್ರದಲ್ಲಿ ಮಾರುಕಟ್ಟೆಗೆ !

spot_img
- Advertisement -
- Advertisement -

ಕೇದಾರೋತ್ಥಾನ ಟ್ರಸ್ಟ್ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡ ಹಡಿಲು ಭೂಮಿ ಕೃಷಿಯಲ್ಲಿ ಉತ್ಪಾದಿಸಿದ ಸಂಪೂರ್ಣ ಸಾವಯುವ ಕುಚ್ಚಲಕ್ಕಿ ” ಉಡುಪಿ ಕೇದಾರ ಕಜೆ ” ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಕಟಾವು ಕಾರ್ಯ ಮುಕ್ತಾಯ ಹಂತದಲ್ಲಿದೆ. ಉತ್ಪಾದನೆಯಾದ ಭತ್ತವನ್ನು ಅಕ್ಕಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಈಗಾಗಲೇ ಕಟಾವು ಮಾಡಿ ಬೇರ್ಪಡಿಸಿದ ಭತ್ತವನ್ನು ಆದಿ ಉಡುಪಿ ಎ.ಪಿ.ಎಂ.ಸಿ. ಗೋಧಾಮಿನಲ್ಲಿ ದಾಸ್ತಾನು ಮಾಡಲಾಗಿದ್ದು , ಅಲ್ಲಿಗೆ ಉಡುಪಿ ಶಾಸಕರಾದ ರಘುಪತಿ ಭಟ್ ಅವರು ಭೇಟಿ ನೀಡಿ ವೀಕ್ಷಿಸಿದರು.

ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿಯಲ್ಲಿ ಸುಮಾರು 1500 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿದ್ದು , ಗದ್ದೆಗಳ ಕಟಾವು ಕಾರ್ಯ ಮುಕ್ತಾಯ ಹಂತದಲ್ಲಿದೆ.

ಸ್ವಯಂ ಸೇವಕರು , ಕಾರ್ಯಕರ್ತರು , ವಿದ್ಯಾರ್ಥಿಗಳು , ಅಧ್ಯಾಪಕರು , ರೈತರು ಸೇರಿದಂತೆ ಎಲ್ಲರು ಕೈಜೋಡಿಸಿ ಪರಿಶ್ರಮದಿಂದ ಕೃಷಿ ಆಂದೋಲನ ಯಶಸ್ವಿಗೊಳಿಸಿದರು .

- Advertisement -
spot_img

Latest News

error: Content is protected !!