Monday, June 8, 2026
Homeಇತರಮೂಡುಬಿದಿರೆ: ಪಿಕ್ ಅಪ್ ವಾಹನ ಪಲ್ಟಿ- ಚಾಲಕ ಸಾವು...!

ಮೂಡುಬಿದಿರೆ: ಪಿಕ್ ಅಪ್ ವಾಹನ ಪಲ್ಟಿ- ಚಾಲಕ ಸಾವು…!

- Advertisement -
- Advertisement -

ಮೂಡುಬಿದಿರೆ: ಪಿಕ್ ಅಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪಿದ ಘಟನೆ ಮೂಡುಬಿದಿರೆಯ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲುಸುತ್ತಿನಲ್ಲಿ ನಡೆದಿದೆ. ಮೃತರನ್ನು ಎಡಪದವು ಕನ್ನೊಳಿ ನಿವಾಸಿ ಯಾದವ (38) ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಯಾದವರವರು ಮೂಡುಬಿದಿರೆ ಕಡೆಯಿಂದ ಎಡಪದವಿಗೆ ಪಿಕ್ ವಾಹನ ಚಲಾಯಿಸುತ್ತಿದ್ದು, ಹಂಡೇಲು ತಿರುವಿನಲ್ಲಿ ಪಿಕ್ ಅಪ್ ಪಲ್ಟಿಯಾಗಿ, ತೆಂಗಿನ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಯಾದವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಈ ಬಗ್ಗೆ, ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!