Wednesday, June 26, 2024
Homeಕರಾವಳಿಉಡುಪಿಕರಾವಳಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 11ರ ಬಾಲೆ: ಪುರುಷರಿಗೆ ಮೀಸಲಾಗಿದ್ದ ಕಂಬಳ ಕ್ಷೇತ್ರಕ್ಕೆ ಅಡಿ...

ಕರಾವಳಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 11ರ ಬಾಲೆ: ಪುರುಷರಿಗೆ ಮೀಸಲಾಗಿದ್ದ ಕಂಬಳ ಕ್ಷೇತ್ರಕ್ಕೆ ಅಡಿ ಇಟ್ಟ ಉಡುಪಿಯ ಪೋರಿ

spot_img
- Advertisement -
- Advertisement -

ಉಡುಪಿ: ಕರಾವಳಿ ಭಾಗದ ಜನಪದ ಕ್ರೀಡೆ ಕಂಬಳ ಅಂದ್ರೆ ಅದು ಪುರುಷರಿಗಷ್ಟೇ ಮೀಸಲು ಅನ್ನೋದು ಇಷ್ಟು ದಿನ ಪ್ರಚಲಿತದಲ್ಲಿದ್ದದ್ದು. ಆದ್ರೀಗ ಕಂಬಳ ಗದ್ದೆಗೆ ಹೆಣ್ಮಕ್ಕಳು ಕೂಡ ಇಳಿಯಬಲ್ಲರು ಅನ್ನೋದನ್ನು ಉಡುಪಿಯ 11 ವರ್ಷದ ಪೋರಿಯೊಬ್ಬಳು ತೋರಿಸಿ ಕೊಟ್ಟಿದ್ದಾಳೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ 11ರ ಕುವರಿಯೊಬ್ಬಳು ಕಂಬಳ ಗದ್ದೆಗೆ ಇಳಿಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಕೆಲವು ದಿನಗಳ ಹಿಂದೆ ಮಿಯಾರುವಿನ ಪ್ರಸಿದ್ಧ ಲವಕುಶ ಜೋಡುಕರೆ ಕಂಬಳದಲ್ಲಿ ಚೈತ್ರಾ ಎಂಬ 11ರ ಬಾಲಕಿ ಮೊಟ್ಟ ಮೊದಲ ಬಾರಿಗೆ ಕಂಬಳ ಗದ್ದೆಗೆ ಇಳಿಯುವ ಮೂಲಕ ಅನೇಕರು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಚೈತ್ರಾ ಕುಂದಾಪುರ ತಾಲೂಕಿನ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್‌, ರಮ್ಯಾ ದಂಪತಿಯ ಪುತ್ರಿ. ಈ ದಂಪತಿಯ ಇಬ್ಬರು ಮಕ್ಕಳ ಪೈಕಿ ಚೈತ್ರಾಗೆ ಕಂಬಳವೆಂದರೆ ಅದೇನೋ ಸೆಳೆತ. ಮನೆಯಲ್ಲಿ ತಂದೆಯೂ ಕಂಬಳದ ಕೋಣಗಳನ್ನು ಸಾಕುತ್ತಿದ್ದರಿಂದ ಚೈತ್ರಾಗೆ ಬಾಲ್ಯದಿಂದಲೇ ಕಂಬಳ ಕಡೆಗೆ ಆಸಕ್ತಿ ಬೆಳೆಯೋದಕ್ಕೆ ಶುರುವಾಯ್ತು. ಅಲ್ಲದೇ ಕೋಣಗಳೊಂದಿಗೆ ಒಡನಾಟ ಹೆಚ್ಚಾಯ್ತು.  ಇದೇ ಆಸಕ್ತಿ ಆಕೆಯನ್ನು ಕಂಬಳ ಗದ್ದೆಗೂ ಇಳಿಸಿದೆ.

ಇನ್ನು ಈಕೆ ಕಾಲ್ತೊಡು ಸರಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಳೆ. ಸದ್ಯ ಚೈತ್ರಾ ಓದಿನ ಜೊತೆಗೆ ಕಂಬಳದ ಎಬಿಸಿಡಿ ಕಲಿಯುತ್ತಿದ್ದಾಳೆ. ಈಕೆ ಮುಂದೊಂದು ದಿನ ಪೂರ್ಣ ಪ್ರಮಾಣದ ಕಂಬಳದಲ್ಲಿ ಭಾಗವಹಿಸಿ ಕರಾವಳಿಯ ಪುರುಷ ಪ್ರಧಾನ ಕಂಬಳದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವೂ ಇಲ್ಲ

- Advertisement -
spot_img

Latest News

error: Content is protected !!