Friday, June 26, 2026
Homeಕರಾವಳಿಬೆಳ್ತಂಗಡಿ: ಬೈಕ್-ಬಸ್ ಡಿಕ್ಕಿ, ಗಾಯಗೊಂಡಿದ್ದ ಸವಾರ ಆಸ್ಪತ್ರೆಯಲ್ಲಿ ಸಾವು

ಬೆಳ್ತಂಗಡಿ: ಬೈಕ್-ಬಸ್ ಡಿಕ್ಕಿ, ಗಾಯಗೊಂಡಿದ್ದ ಸವಾರ ಆಸ್ಪತ್ರೆಯಲ್ಲಿ ಸಾವು

- Advertisement -
- Advertisement -

ಬೆಳ್ತಂಗಡಿ: ಉಜಿರೆ-ಚಿಕ್ಕಮಗಳೂರು ಹೆದ್ದಾರಿಯ ಸೋಮಂತಡ್ಕ ಸಮೀಪದ ಮುಂಡಾಜೆಯ ಸೀಟ್ ಬಳಿ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತನನ್ನು ಕಡಿರುದ್ಯಾವರ ಗ್ರಾಮದ ಎರ್ಮಾಲಪಲ್ಕೆಯ ಸುದರ್ಶನ್ (22) ಮೃತ ದುರ್ದೈವಿ.

ಸುದರ್ಶನ್ ಮತ್ತು ಅವರ ತಾಯಿ ನಿನ್ನೆ ಮುಂಡಾಜೆ ಸೀಟ್ ಬಳಿ ಬೈಕ್ ನಲ್ಲಿ ಸಂಚರಿಸುವಾಗ ಬಸ್ ಒಂದು ಡಿಕ್ಕಿ ಹೊಡೆದಿತ್ತು. ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಸುದರ್ಶನ್ ನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾತ್ತು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಹಾಗೆ ಬೈಕ್ ನಲ್ಲಿ ಹಿಬಂಡಿ ಸವಾರೆಯಾಗಿದ್ದ ಇವರ ತಾಯಿ ಗುಲಾಬಿಯವರಿಗೂ ಗಾಯಗಳಾಗಿದ್ದು, ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಅಪಘಾತಕ್ಕೆ ಮುಖ್ಯ ಕಾರಣವಾಗಿದ್ದ ಬಸ್ ನ ಚಾಲಕ, ಘಟನೆ ನಡೆದಿದ್ದ ಸ್ಥಳದಿಂದ ಬಸ್ ನೊಂದಿಗೆ ಪರಾರಿಯಾಗಿದ್ದ. ನಂತರ ಪ್ರತ್ಯಕ್ಷ ದರ್ಶಿಗಳ ಸಹಾಯದಿಂದ ಘಟನಾ ಸ್ಥಳದಿಂದ 3 ಕಿ.ಮೀ ದೂರದ ಕಾಪಿನ ಬಾಗಿಲು ಎಂಬಲ್ಲಿ ಬಸ್ ಮತ್ತು ಚಾಲಕನನ್ನು ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!