Thursday, June 25, 2026
Homeಕರಾವಳಿಉಡುಪಿಸ್ಪೋಟಕ ಮಾಹಿತಿ ಬಿಚ್ಚಿಟ್ಟ ಉಡುಪಿ ಜಿಲ್ಲಾಡಳಿತ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಂಭವ

ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಉಡುಪಿ ಜಿಲ್ಲಾಡಳಿತ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಂಭವ

- Advertisement -
- Advertisement -

ಬೆಂಗಳೂರು: ಕೃಷ್ಣನಗರಿ ಉಡುಪಿಯಲ್ಲಿ ಕೊರೊನಾ ಆತಂಕ ಮನೆ ಮಾಡಿದ್ದು, ಉಡುಪಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 991 ಕ್ಕೆ ಏರಿಕೆಯಾಗಿದೆ. ಇದರ ನಡುವೆ ಜಿಲ್ಲಾಡಳಿತ ಮತ್ತೊಂದು ಸ್ಪೋಟಕ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಿಂದ ಉಡುಪಿಗೆ ಇನ್ನೂ 5000 ಮಂದಿ ಬರಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇದರಿಂದ ಉಡುಪಿಯಲ್ಲಿ ಜುಲೈ ತಿಂಗಳಲ್ಲಿ ಇನ್ನಷ್ಟು ಆತಂಕ ಶುರುವಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ನಿನ್ನೆ ಉಡುಪಿಯಲ್ಲಿ 21 ಕೇಸ್ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 991 ಕ್ಕೆ ಏರಿಕೆಯಾಗಿದೆ.

ಇನ್ನೂ, ಇಂದು ಉಡುಪಿಯಲ್ಲಿ ಎಷ್ಟು ಮಂದಿ ಸೋಂಕಿತರ ಲೆಕ್ಕ ಸಿಗಬಹುದು ಎಂಬ ಆತಂಕ ಎಲ್ಲರಲ್ಲಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 991 ಆಗಿದ್ದು, 1 ಸಾವಿರದ ಗಡಿಗೆ ಒಂಬತ್ತು ಬಾಕಿಯಿದೆ ಅಷ್ಟೇ.

- Advertisement -

Latest News

error: Content is protected !!