Wednesday, June 3, 2026
Homeಕರಾವಳಿಮಾಣಿ: ಪ್ಯಾಂಟಿನಿಂದ ನೇಣು ಬಿಗಿದುಕೊಂಡು ಅಪರಿಚಿತ ವ್ಯಕ್ತಿ ಸಾವು

ಮಾಣಿ: ಪ್ಯಾಂಟಿನಿಂದ ನೇಣು ಬಿಗಿದುಕೊಂಡು ಅಪರಿಚಿತ ವ್ಯಕ್ತಿ ಸಾವು

- Advertisement -
- Advertisement -

ವಿಟ್ಲ: ರಾಷ್ಟ್ರೀಯ ಹೆದ್ದಾರಿಯ ಮಾಣಿಯ ಪಳಿಕೆಯಲ್ಲಿ ಮರದ ಬುಡವೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.

ಮರದಲ್ಲಿ ವ್ಯಕ್ತಿಯ ಪ್ಯಾಂಟು ನೇತಾಡುತ್ತಿದ್ದು, ಆತ ಆ ಪ್ಯಾಂಟನ್ನೇ ಉಪಯೋಗಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತನ ಹೆಸರು ಮತ್ತು ವಿಳಾಸ ಇನ್ನೂ ತಿಳಿದು ಬಂದಿಲ್ಲ. ಈತನ ಗುರುತು ಪತ್ತೆಯಾದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.

ಸ್ಥಳಕ್ಕೆ ವಿಟ್ಲ ಠಾಣಾಧಿಕಾರಿ ವಿನೋದ್ ಎಸ್‌.ಕೆ ಮತ್ತು ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!