Saturday, October 17, 2026
Homeಕರಾವಳಿಉಡುಪಿಉಡುಪಿ; ಕೆಟ್ಟು ನಿಂತ ಲಾರಿಗೆ ಬೈಕ್ ಡಿಕ್ಕಿ,ಸವಾರ ಸಾವು

ಉಡುಪಿ; ಕೆಟ್ಟು ನಿಂತ ಲಾರಿಗೆ ಬೈಕ್ ಡಿಕ್ಕಿ,ಸವಾರ ಸಾವು

- Advertisement -
- Advertisement -

ಉಡುಪಿ; ಕೆಟ್ಟು ನಿಂತ ಲಾರಿಗೆ ಬೈಕ್ ಡಿಕ್ಕಿ,  ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಪರ್ಕಳ ಎಸ್‌ಬಿಐ ಬ್ಯಾಂಕಿನ ಎದುರು ಇಂದು ಸಂಜೆ ವೇಳೆ ನಡೆದಿದೆ. ಶೆಟ್ಟಿಬೆಟ್ಟುವಿನ ದೇವು ಪೂಜಾರಿ ಮಗ ಸೃಜನ್ ಸಾಗರ್(22) ಮೃತ  ಯುವಕ.

ಭಾನುವಾರ ಮೂರು ಗಂಟೆ ವೇಳೆಗೆ ನೀರಿನ ಟ್ಯಾಂಕ್ ರಿನ ಮುಂಭಾಗದ ಟೈಯರ್ ಒಡೆದು ಅಲ್ಲಿ ನಿಂತಿತ್ತು. ನಿಂತಿದ್ದ ನೀರಿನ ಟ್ಯಾಂಕರ್ ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸೃಜನ್ ಮಣಿಪಾಲ ಆಸ್ಪತ್ರೆ ಸಾಗಿಸುವ ದಾರಿ ಮತ್ತೆ ಮೃತಪಟ್ಟಿದ್ದಾರೆ . ಇವರು ಇತ್ತೀಚೆಗಷ್ಟೇ ಮಣಿಪಾಲದ ಕೆಎಂಸಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು ಎನ್ನಲಾಗಿದೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!