Saturday, May 4, 2024
Homeಕರಾವಳಿಉಡುಪಿಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ

ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ

spot_img
- Advertisement -
- Advertisement -

ಉಡುಪಿ: ಪುತ್ರ ಹಾಗೂ ಪ್ರಿಯಕರನ ಜೊತೆಗೂಡಿ ಪತಿಯನ್ನು ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ್ದ ಪ್ರಕರಣ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನ್ಯಾಯಾಲಯ ಮುಂದೂಡಿದ್ದು, ಸದ್ಯದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇರುವುದರಿಂದ ಕುತೂಹಲ ಮೂಡಿಸಿದೆ.

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 8ಕ್ಕೆ ಅಂತಿಮ ತೀರ್ಪು ಹೊರಬೀಳಲಿದೆ. ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ, ಪ್ರಿಯಕರ ನಿರಂಜನ್​ ಭಟ್​, ಪುತ್ರ ನವನೀತ್ ಶೆಟ್ಟಿ ಪ್ರಮುಖ ಆರೋಪಿಗಳು. 2016ರ ಜುಲೈ ತಿಂಗಳಲ್ಲಿ ಈ ಭೀಕರ ಕೊಲೆ ನಡೆದಿತ್ತು.

ಸೋಮವಾರ ಪ್ರಕಟವಾಗಬೇಕಿದ್ದ ಅಂತಿಮ ತೀರ್ಪನ್ನು ಕೋವಿಡ್‌ ಕಾರಣದಿಂದಾಗಿ ಜೂ.8ಕ್ಕೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ ಮುಂದೂಡಿದ್ದಾರೆ. ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್‌ ಭದ್ರತೆಯನ್ನು ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಜೂ.8ರಂದು ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ಹಾಗೂ ರಾಘವೇಂದ್ರ ಅವರು ಇರುವಂತೆ ಸೂಚಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್‌ ಮೂಲಕ ಉಳಿದ ಆರೋಪಿಗಳೂ ಹಾಜರಿರುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಈ ಪೈಕಿ ಆರೋಪಿ ಶ್ರೀನಿವಾಸ ಭಟ್‌ ಈಗಾಗಲೇ ಮೃತಪಟ್ಟಿದ್ದಾರೆ.

ಯಾಕೆ ಕೊಲೆ ನಡೆದಿತ್ತು?
ಭಾಸ್ಕರ ಶೆಟ್ಟಿ ದುಬೈನಲ್ಲಿ ಬಹುಕೋಟಿ ರೂಪಾಯಿ ಉದ್ಯಮಿಯಾಗಿದ್ದರು. ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಗೆ ಒಂದು ದಿನ ಆಗಮಿಸಿದ್ದಾಗ ಅವರು ಪತ್ನಿಯ ಮೊಬೈಲ್​ಫೋನ್​ನಲ್ಲಿ ಆಕೆ ಪ್ರಿಯಕರನೊಂದಿಗೆ ಅಶ್ಲೀಲ ಭಂಗಿಯಲ್ಲಿ ಇರುವುದನ್ನು ಗಮನಿಸಿದ್ದರು. ಹೀಗಾಗಿ ತಮ್ಮ ಎಲ್ಲ ಆಸ್ತಿಯನ್ನು ತಾಯಿಯ ಹೆಸರಿಗೆ ನೋಂದಣಿ ಮಾಡಿಸಲು ಭಾಸ್ಕರ ಶೆಟ್ಟಿ ಮುಂದಾಗಿದ್ದರು. ಇದಕ್ಕಾಗಿ ಪತಿ ವಕೀಲರ ಬಳಿ ಹೋಗಲಿರುವುದನ್ನು ತಿಳಿದ ಪತ್ನಿ ರಾಜೇಶ್ವರಿ ಪ್ರಿಯಕರನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು.

ಪುತ್ರ ನವನೀತ್ ಜತೆ ಸೇರಿ ಮನೆಯಲ್ಲೇ ಪತಿಯನ್ನು ಅರೆಜೀವಗೊಳಿಸಿ ನಂತರ ಕಾರಿನಲ್ಲಿ ನಂದಳಿಕೆಯಲ್ಲಿನ ಪ್ರಿಯಕರನ ಮನೆಗೆ ತಂದಿದ್ದಳು. ಅಲ್ಲಿ ಹೋಮಕುಂಡ ನಿರ್ಮಿಸಿ, ಪತಿಯ ದೇಹವನ್ನು ಅದಕ್ಕೆ ಹಾಕಿ ಸುಟ್ಟು ಪೂರ್ತಿಯಾಗಿ ಸಾಯಿಸಲಾಗಿತ್ತು. ಬಳಿಕ ಎಲುಬು ಹಾಗೂ ಭಸ್ಮವನ್ನು ಹತ್ತಿರದ ನದಿಗೆ ಎಸೆದಿದ್ದರು.

- Advertisement -
spot_img

Latest News

error: Content is protected !!