Sunday, October 18, 2026
Homeಕರಾವಳಿಉಡುಪಿಉಡುಪಿ: ಬೈಂದೂರಿನಲ್ಲಿ ಬಿಜೆಪಿ ರೋಡ್ ಶೋ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ‌ ಆ್ಯಂಬ್ಯುಲೆನ್ಸ್

ಉಡುಪಿ: ಬೈಂದೂರಿನಲ್ಲಿ ಬಿಜೆಪಿ ರೋಡ್ ಶೋ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ‌ ಆ್ಯಂಬ್ಯುಲೆನ್ಸ್

- Advertisement -
- Advertisement -

ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬೈಂದೂರಿನಲ್ಲಿ ನಡೆದ ರೋಡ್ ಶೋ ವೇಳೆ ಆ್ಯಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಬಿಜೆಪಿ ನಾಯಕರ ರೋಡ್ ಶೋ ವೇಳೆಯಲ್ಲಿ ಸುಮಾರು
20 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಆ್ಯಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡಿತ್ತು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು.ಬೈಂದೂರಿನಿಂದ ಗಂಗೊಳ್ಳಿವರೆಗೆ ಇಂದು ರೋಡ್ ಶೋ ನಡೆದಿತ್ತು.

- Advertisement -

Latest News

error: Content is protected !!