ಉಡುಪಿ: ಮಹಿಳೆಯ 45 ಗ್ರಾಂ ತೂಕದ ಕರಿಮಣಿ ಸರ ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದ ಸರಳಬೆಟ್ಟುವಿನ ಸಂತೋಷ್( 29 ), ಬಂಧಿತ.
ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಹಿಳೆ ಮಾರ್ಚ್ 29 ರಂದು ಸಂಜೆ 5:30 ರ ವೇಳೆಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿದ ಕಳ್ಳ WGSHA ಕಾಲೇಜಿನ ಹಿಂಬದಿ ಕುತ್ತಿಗೆಗೆ ಕೈ ಹಾಕಿ 45 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ ಪರಾರಿಯಾಗಿದ್ದ. ಅದರಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಆರೋಪಿಗಾಗಿ ಬಲೆ ಬೀಸಿದ ಮಣಿಪಾಲ ಠಾಣೆ ಪಿಐ ದೇವರಾಜ ಟಿವಿ ,ಎಎಸ್‌ಐ ವಿವೇಕ್ ,ಹೆಚ್ ಸಿ ಪ್ರಸನ್ನ ,ಪಿಸಿ ಮಂಜುನಾಥ ಹಾಗೂ ಪಿಸಿ ರವಿರಾಜ್ ರವರನ್ನೊಳಗೊಂಡ ತಂಡ, ಶ್ವಾನದಳ ನೀಡಿದ ಸುಳಿವನ್ನು ಆಧರಿಸಿ ದಿನಾಂಕ:03.04.2025 ರಂದು ಆರೋಪಿ ಸಂತೋಷ್ ನನ್ನು ಬಂಧಿಸಿ ಕಳ್ಳತನ ಮಾಡಿದ ಸುಮಾರು 3.5 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.