Thursday, June 4, 2026
HomeUncategorizedಪರ್ಲಿಯಾ ಬಳಿ ಎರಡು ತಂಡಗಳ ಹೊಡೆದಾಟ: ಪ್ರಕರಣ ದಾಖಲು

ಪರ್ಲಿಯಾ ಬಳಿ ಎರಡು ತಂಡಗಳ ಹೊಡೆದಾಟ: ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಎರಡು ತಂಡಗಳ ಮಧ್ಯೆ ಡಿ. 11ರ ತಡರಾತ್ರಿ 1.30ರ ಸುಮಾರಿಗೆ ಬಿ.ಸಿ.ರೋಡಿನ ಪರ್ಲಿಯಾ ಬಳಿಯ ಮದ್ದದಲ್ಲಿ ಮಾರಾಮಾರಿ ನಡೆದಿದ್ದು, ಈ ಕುರಿತಂತೆ ಬಂಟ್ವಾಳ ನಗರ ಠಾಣೆಯಲ್ಲಿ ತಂಡಗಳು ನೀಡಿದ ದೂರಿನಂತೆ ಪ್ರತ್ಯೇಕ ದೂರು ದಾಖಲಾಗಿದೆ.

ಮದ್ದ ಮನೆ ನಿವಾಸಿ ಸಾಹುಲ್‌ ಹಮೀದ್‌ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು, ‘ಆರೋಪಿಗಳು ತಮ್ಮ ಮನೆಯವರೆಲ್ಲ ಮಲಗಿರುವ ಸಂದರ್ಭದಲ್ಲಿ ಎರಡು ಕಾರಿನಲ್ಲಿ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಪೊಲೀಸರಿಗೆ ತಮ್ಮ ವಿಚಾರವನ್ನು ತಿಳಿಸುತ್ತಿಯಾ ಎಂದು ಸುಮಾರು 15 ಮಂದಿ ಆರೋಪಿಗಳು ತಗಾದೆ ತೆಗೆದು ನಿಮನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪುತ್ರಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೂಡ ಆರೋಪಿಗಳು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಳಿಪಡ್ಪು ನಿವಾಸಿ ಮಹಮ್ಮದ್‌ ಇರ್ಫಾನ್‌ ಅವರು ಮತ್ತೊಂದು ತಂಡದಿಂದ ದೂರು ನೀಡಿದ್ದು, ಬಾಡಿಗೆ ಕೊಡುವ ವಿಚಾರಕ್ಕೆ ಸಂಬಂಧಿಸಿ ತಾನು ಸ್ನೇಹಿತರ ಜತೆ ಡಿ. 11ರಂದು ತಡರಾತ್ರಿ 1ಕ್ಕೆ ಪರ್ಲಿಯಾದ ಸಾಹುಲ್‌ ಅವರ ಮನೆಗೆ ಹೋಗಿ ಹಿಂದಿರುವ ವೇಳೆ ಆರೋಪಿಗಳಾದ ಸಾಹುಲ್‌ ಮತ್ತಿತರರು ತಮ್ಮ ಕಾರಿಗೆ ಕಲ್ಲು ಬಿಸಾಡಿ ಕಾರಿನ ಗಾಜಿಗೆ ಹಾನಿ ಮಾಡಿದ್ದಾರೆ.

- Advertisement -

Latest News

error: Content is protected !!