- Advertisement -
- Advertisement -
ಕಾರ್ಕಳ: ಕಬಡ್ಡಿ ಆಟಗಾರನೊಬ್ಬ ಕಬಡ್ಡಿ ಆಡುತ್ತಿರುವಾಗಲೇ ಎದೆನೋವು ಕಾಣಿಸಿಕೊಂಡು ಆಡುತ್ತಲೇ ಉಸಿರು ಚೆಲ್ಲಿದ ಮನ ಮಿಡಿಯುವ ಘಟನೆ ಮಂಡ್ಯದಲ್ಲಿ ನಡೆದಿದೆ. ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಕಾರ್ಕಳದ ಮುನಿಯಲು ನಿವಾಸಿ ಪ್ರೀತಮ್ ಶೆಟ್ಟಿ (26) ಮೃತ ದುರ್ದೈವಿ.
ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ ತಂಡದ ಸಕ್ರಿಯ ಆಹ್ವಾನಿತ ಆಟಗಾರರಾಗಿದ್ದರು.ಎಸ್. ಡಿ. ಎಂ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರತಿಭಾನ್ವಿತ ಆಟಗಾರರಾಗಿದ್ದರು. ನಿನ್ನೆ ಕಬಡ್ಡಿ ಪಂದ್ಯಾವಳಿ ಹಿನ್ನೆಲೆ ಮಂಡ್ಯಕ್ಕೆ ತೆರಳಿದ್ದ ಪ್ರೀತಮ್ ಶೆಟ್ಟಿ ಅವರಿಗೆ ಆಟದ ನಡುವೆ ಎದೆ ನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
- Advertisement -