Sunday, June 7, 2026
Homeಕರಾವಳಿಕಾಸರಗೋಡುಕಾಸರಗೋಡು : ನಸುಕಿನ ಜಾವ ಬ್ಯಾಂಕ್ ದರೋಡೆಗೆ ಯತ್ನಿಸುತ್ತಿದ್ದ ಇಬ್ಬರ ಬಂಧನ

ಕಾಸರಗೋಡು : ನಸುಕಿನ ಜಾವ ಬ್ಯಾಂಕ್ ದರೋಡೆಗೆ ಯತ್ನಿಸುತ್ತಿದ್ದ ಇಬ್ಬರ ಬಂಧನ

- Advertisement -
- Advertisement -

ಕಾಸರಗೋಡು : ನಸುಕಿನ ಜಾವ ದರೋಡೆಗೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ವರ್ಕಾಡಿ ಸಮೀಪದ ಮಜೀರ್ ಪಳ್ಳದಲ್ಲಿ ನಡೆದಿದೆ.

ಉಳ್ಳಾಲದ ಫೈಝಲ್ ಮತ್ತು ತುಮಕೂರಿನ ಶಹೀದ್ ಅಮಾನ್ ಬಂಧಿತರು . ನಾಲ್ವರು ಪರಾರಿಯಾಗಿದ್ದಾರೆ. ಬ್ಯಾಂಕ್ ದರೋಡೆಗೆ ಬಂದಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ .

ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಸಂಶಯಾಸ್ಪದವಾಗಿ ಕಂಡು ಬಂದ ಇವರನ್ನು ಗಸ್ತು ತಿರುಗುತ್ತಿದ್ದ ಮಂಜೇಶ್ವರ ಪೊಲೀಸರು ಕಾರನ್ನು ನಿಲ್ಲಿಸಿ ವಿಚಾರಿಸಿದಾಗ ನಾಲ್ವರು ಪರಾರಿಯಾಗಿದ್ದು , ಇಬ್ಬರನ್ನು ನಾಗರಿಕರ ಸಹಾಯದಿಂದ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆ ಹಿಡಿಯುವವ ಮಧ್ಯೆ ಪೊಲೀಸರು ಮತ್ತು ದರೋಡೆಕೋರರ ನಡುವೆ ಹೊಡೆದಾಟ ನಡೆದಿದೆ.

ಗಾಯಗೊಂಡ ಇಬ್ಬರು ದರೋಡೆಕೋರರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾದವರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಇವರಿಗಾಗಿ ಶೋಧ ನಡೆಯುತ್ತಿದೆ. ಕಾರಿನಿಂದ ಗ್ಯಾಸ್ ಕಟ್ಟರ್ , ಸಿಲಿಂಡರ್ ಮೊದಲಾದವುಗಳು ಪತ್ತೆಯಾಗಿದೆ ಬ್ಯಾಂಕ್ ಸೇರಿದಂತೆ ಹಲವು ದರೋಡೆಗೆ ಇವರು ಹೊಂಚು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜೇಶ್ವರ ಠಾಣಾ ವ್ಯಾಪ್ತಿ ಸೇರಿದಂತೆ ಹಲವೆಡೆ ಕಳೆದ ಕೆಲ ದಿನಗಳಿಂದ 15 ಕ್ಕೂ ಅಧಿಕ ಕೃತ್ಯಗಳು ನಡೆದಿದ್ದು , ಈ ಕೃತ್ಯಗಳಲ್ಲಿ ಈ ತಂಡ ಶಾಮೀಲಾಗಿದೆಯೇ ಎಂಬ ಮಾಹಿತಿ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!