Friday, June 5, 2026
Homeಕರಾವಳಿಉಡುಪಿಉಡುಪಿ ಕಾಮಿನಿ ಹೊಳೆಗೆ ಸ್ನಾನಕ್ಕೆ ಇಳಿದು ನೀರುಪಾಲಾದ ಬಾಲಕರು!.. ಓರ್ವ ಬಾಲಕನನ್ನುರಕ್ಷಿಸಿದ ಸ್ಥಳೀಯರು

ಉಡುಪಿ ಕಾಮಿನಿ ಹೊಳೆಗೆ ಸ್ನಾನಕ್ಕೆ ಇಳಿದು ನೀರುಪಾಲಾದ ಬಾಲಕರು!.. ಓರ್ವ ಬಾಲಕನನ್ನುರಕ್ಷಿಸಿದ ಸ್ಥಳೀಯರು

- Advertisement -
- Advertisement -

ಉಡುಪಿ: ಇಲ್ಲಿನ ಹೆಜಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಳಿವೆ ಬಳಿ ಸ್ನಾನಕ್ಕೆ ಇಳಿದ ಮೂವರು ಬಾಲಕರ ಪೈಕಿ ಇಬ್ಬರು ನೀರು ಪಾಲಾದ ಘಟನೆ ನಡೆದಿದೆ. ಓರ್ವ ಬಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಸ್ಥಳೀಯ ಬಾಲಕ ಮೋಸಿನ್ (16) ಮತ್ತು ಮೊಹಮ್ಮದ್ ರಾಯಿಸ್ (16) ಮೃತಪಟ್ಟವರು. ಮೊಹಮ್ಮದ್ ನಬೀಲ್ (16) ಎಂಬ ಬಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.ಮೂವರು ನೀರಿಗಿಳಿದು ಈಜಲು ಆರಂಭಿಸಿದಾಗ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ.
ಇದನ್ನು ಕಂಡ ಮಹಿಳೆಯೊಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಮೂವರನ್ನು ಮೇಲಕ್ಕೆತ್ತಲಾಗಿದೆ.

ಓರ್ವ ಅಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಒಬ್ಬ ಯುವಕ ಅಪಾಯದಿಂದ ಪಾರಾಗಿದ್ದಾನೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!