ಮಂಗಳೂರು: ಕಾಲೇಜು ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಈಗ ಕಾರಣ ಬಹಿರಂಗವಾಗಿದೆ.
ಪುಟ್ ಬಾಲ್ ಆಟದ ವಿಚಾರದಲ್ಲಿ ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ ಯೇನಪೋಯ ಕಾಲೇಜಿನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಮತ್ತು ಮಾತಾ ಸಂಸ್ಥೆಯ ಓರ್ವ ವಿದ್ಯಾರ್ಥಿಯನ್ನು ಕರೆಸಿ ಅಪಹರಿಸಿ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಮಹಾಕಾಳಿಪಡ್ಪು ಸೇರಿದಂತೆ ಬೇರೆ ಬೇರೆ ಭಾಗದಲ್ಲಿ ಹಲ್ಲೆ ನಡೆಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪೈಕಿ ಓರ್ವನ ತಂದೆ ನಿನ್ನೆ ರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರ ಅನ್ವಯ ಪೊಲೀಸರು ವಿದ್ಯಾರ್ಥಿಯಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ನಂತರ ತನಿಖೆ ನಡೆಸಿದ್ದ ಪಾಂಡೇಶ್ವರ ಠಾಣೆ ಪೊಲೀಸರು ದಿಯಾನ್ ಮತ್ತು ಸಲ್ಮಾನ್ ಎಂಬ ಇಬ್ಬರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಇನ್ನುಳಿದವರ ಬಂಧನಕ್ಕೆ ಶೋಧ ನಡೆಸಿದ್ದಾರೆ.
ಆಗಸ್ಟ್ 14 ರಂದು ಯೇನಪೋಯ ಹಾಗೂ ಅಲೋಶಿಯಸ್ ಕಾಲೇಜು ಮಧ್ಯೆ ಫುಟ್ ಬಾಲ್ ಮ್ಯಾಚ್ ನಡೆದಿದ್ದು, ಪಂದ್ಯದಲ್ಲಿ ಗೆದ್ದಿದ್ದ ಯೇನಪೋಯ ಕಾಲೇಜಿನ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದ ವೇಳೆಯಲ್ಲಿ ಜಗಳ ನಡೆದಿದೆ.
ಸಂಭ್ರಮಾಚರಣೆ ವೇಳೆ ನಡೆದಿದ್ದ ಜಗಳದ ಮುಂದುವರಿದ ಭಾಗವಾಗಿ ಅಪಹರಿಸಿ ಹಲ್ಲೆ ಮಾಡಲಾಗಿದ್ದು, ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಬೇಕಿದೆ.
ಹಲ್ಲೆ ಆರೋಪಿ ವಿದ್ಯಾರ್ಥಿಗಳು ಅಲೋಶಿಯಸ್ ಕಾಲೇಜಿನವರಾಗಿದ್ದು, ಇದರಲ್ಲಿ ಕೆಲವರು ಕಾಲೇಜು ಡ್ರಾಪ್ ಔಟ್ ಆಗಿದ್ದರೆ, ಕೆಲವರು ಕೇರಳ ಮೂಲದವರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ