Thursday, June 4, 2026
Homeತಾಜಾ ಸುದ್ದಿಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತೆ ಅರೆಸ್ಟ್

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತೆ ಅರೆಸ್ಟ್

- Advertisement -
- Advertisement -

ಬೆಂಗಳೂರು; ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ರಿಲೀಸ್ ಆಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತೆ ಅರೆಸ್ಟ್ ಆಗಿದ್ದಾರೆ.


ರಜತ್ ಮತ್ತು ವಿನಯ್ ಗೌಡ ಅವರನ್ನು ಅರೆಸ್ಟ್ ಮಾಡಿದ ಸಂದರ್ಭದಲ್ಲಿ ಬಸವೇಶ್ವರ ನಗರ ಪೊಲೀಸರು  ರೀಲ್ಸ್​ಗೆ ಬಳಕೆ ಮಾಡಿದ್ದ ಶಸ್ತ್ರಾಸ್ತ್ರವನ್ನು ಒಪ್ಪಿಸುವಂತೆ ಸೂಚಿಸಿದ್ದರು ಆದರೆ, ಈ ವೇಳೆ ರಬ್ಬರ್ ಮಚ್ಚು ನೀಡಿ ಯಮಾರಿಸಿ ತಗ್ಲಾಕಿಕೊಂಡಿದ್ದರು.ಬಳಿಕ ಇದು ಕಣ್ತಪ್ಪಿನಿಂದ ಆಗಿದ್ದು, ನಿಜವಾದ ಮಚ್ಚನ್ನು ನೀಡುತ್ತೇವೆ ಎಂದಿದ್ದರು. ಆ ಬಳಿಕ ರೀಲ್ಸ್​ಗೆ ಬಳಕೆ ಆದ ಮಚ್ಚನ್ನು ಎಸೆದಿದ್ದಾಗಿ ರಜತ್ ಒಪ್ಪಿಕೊಂಡಿದ್ದಾರೆ. ಕೇಸ್​ನಲ್ಲಿ ಇದುವರೆಗೆ ಬಳಕೆ ಮಾಡಿದ್ದ ಮಾರಕಾಸ್ತ್ರವನ್ನು ಪೊಲೀಸರ ಎದುರು ಹಾಜರು ಪಡಿಸಿಲ್ಲ. ಹೀಗಾಗಿ ಸಾಕ್ಷಿನಾಶ ಎಂದು ಸಹ ಪೋಲಿಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅತ್ತ ಕೋರ್ಟ್​ನಲ್ಲಿ ರಜತ್​ಗೆ ಜಾಮೀನು ನೀಡಲಾಗಿದೆ. ಈ ವೇಳೆ ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿತ್ತು. ಇದರಲ್ಲಿ ಅವರು ವಿಚಾರಣೆಗೆ ಹಾಜರಿ ಹಾಕಲೇಬೇಕು ಎಂಬುದು ಕೂಡ ಆಗಿತ್ತು.ಆದರೆ, ರಜತ್ ಅವರು ಕೋರ್ಟ್ ವಿಚಾರಣೆಗೆ ಹಾಜರಿ ಹಾಕಿಲ್ಲ. ಹೀಗಾಗಿ, ರಜತ್ ವಿರುದ್ಧ ನಾನ್ ಬೇಲೆಬೆಲ್ ವಾರಂಟ್ ಹೊರಡಿಸಿತ್ತು. ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಸೂಚಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಮತ್ತೊಮ್ಮೆ ರಜತ್​ನ ಬಂಧಿಸಿದ್ದಾರೆ. ಅವರನ್ನು 24ನೇ ಎಸಿಜೆಎಂ ಕೋರ್ಟ್​ಗೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ಬಗ್ಗೆ ಕೋರ್ಟ್ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ. ಇನ್ನು ವಿನಯ್​ಗಾಗಿ ಹುಡುಕಾಟ ನಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!