Saturday, May 18, 2024
Homeಕರಾವಳಿವಿಟ್ಲ :ಎಸ್ಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಿಸಿದ...

ವಿಟ್ಲ :ಎಸ್ಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಿಸಿದ ವಿದ್ಯಾರ್ಥಿನಿಯ ತಂದೆ

spot_img
- Advertisement -
- Advertisement -

ವಿಟ್ಲ : ಎಸ್ಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಮುಸ್ಲಿಂ ಯುವಕನೊಬ್ಬನ ವಿರುದ್ಧ ಮೃತ ವಿದ್ಯಾರ್ಥಿನಿಯ ತಂದೆ ಸಂಜೀವ ಅವರು ದೂರು ದಾಖಲಿಸಿದ್ದಾರೆ.

ನನ್ನ ಮಗಳು ಆತ್ಮಿಕಾ ಸಾವಿಗೆ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಕಾರಣ ಎಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಳ್ಯ ತಾಲೂಕಿನ ಪಂಜ ನಿವಾಸಿಯಾಗಿರುವ ಸಂಜೀವ ಅವರು ವಿಟ್ಲದ ಕನ್ಯಾನದ ಕಣಿಯೂರು ಮಸೀದಿ ಹಿಂಭಾಗದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯಲ್ಲಿ ಬಾಡಿಗೆಗಿದ್ದರು. ಇಂದು ಎಂದಿನಂತೆ ಸಂಜೀವ ಅವರ ಪತ್ನಿ ಕೂಲಿ ಕೆಲಸಕ್ಕೆ ಹೋಗಿದ್ದರು. ಮಗ ಕಾರ್ತಿಕ್ ಔಷಧಿ ತರದಕ್ಕೆಂದು ತೆರಳಿದ್ದ. ಮಗಳು ಆತ್ಮಿಕಾ ಮನೆಯಲ್ಲಿ ಒಬ್ಬಳೇ ಇದ್ದಳು.ಇದೇ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗ್ಗೆ 11-15 ರ ವೇಳೆಗೆ ಪತ್ನಿ ಮನೆಗೆ ಬಂದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಸಂಜೀವ ಅವರು ತಿಳಿಸಿದ್ದಾರೆ.

ಇನ್ನು ನನ್ನ ಮಗಳ ಸಾವಿಗೆ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಎಂಬಾತ ಕಾರಣ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಸಾಹುಲ್ ಹಾಗೂ ನನ್ನ ಮಗಳು ಪ್ರೀತಿಸುತ್ತಿದ್ದರು. ಆಕೆ ಗಂಟೆಗಟ್ಟಲೇ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿ ನಾವು ಪರೀಕ್ಷಿಸಿದಾಗ ಆಕೆ ಸಾಹುಲ್ ಎಂಬಾತನ ಜೊತೆ ಮಾತನಾಡುತ್ತಿರುವುದು ಎಂದು ಗೊತ್ತಾಗಿ ಆಕೆ ಬುದ್ಧಿ ಹೇಳಿದೆವು. ಅಲ್ಲದೇ ಸಾಹುಲ್ ಹಾಗೂ ಆತನ ಅಣ್ಣನನ್ನು ಕರೆಯಿಸಿ ಮಾತನಾಡಿದ್ದೆವು. ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದೆವು.ಆದರೂ ಆತ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದು ಆಕೆಯ ಬಳಿ ನೀನು ನನ್ನನ್ನು ಪ್ರೀತಿಸದಿದ್ದರೆ ಸಾಯುತ್ತೇನೆ ಎಂದು ಹೇಳಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ವಿಚಾರವನ್ನು ಮಗಳು ನಮ್ಮ ಬಳಿ ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೇ ರೀತಿಯ ಬ್ಲ್ಯಾಕ್ ಮೇಲ್ ಗೆ ಹೆದರಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆತ್ಮಿಕಾ ತಂದೆ ಸಂಜೀವ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!