Friday, April 19, 2024
Homeತಾಜಾ ಸುದ್ದಿವ್ಯಾಕ್ಸಿನ್ ತೆಗೆದುಕೊಳ್ಳದೆ ನಾಟಕವಾಡಿದ ಜಿಲ್ಲಾ ವೈದ್ಯಾಧಿಕಾರಿ: ಅಮಾನತ್ತಿಗೆ ಒತ್ತಾಯ

ವ್ಯಾಕ್ಸಿನ್ ತೆಗೆದುಕೊಳ್ಳದೆ ನಾಟಕವಾಡಿದ ಜಿಲ್ಲಾ ವೈದ್ಯಾಧಿಕಾರಿ: ಅಮಾನತ್ತಿಗೆ ಒತ್ತಾಯ

spot_img
- Advertisement -
- Advertisement -

ತುಮಕೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರಕಾರ ಬಿಡುಗಡೆ ಮಾಡಿರುವ ಕೊರೊನಾ ವ್ಯಾಕ್ಸಿನ್ ಅನ್ನು ಡಿಎಚ್‌ಒ ನಾಗೇಂದ್ರಪ್ಪ, ಸರಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಯವರು ಲಸಿಕೆ ತೆಗೆದುಕೊಳ್ಳುವ ನಾಟಕವಾಡಿ ಪೋಸ್ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೃಶ್ಯವು ವೀಡಿಯೋದಲ್ಲಿ ದಾಖಲಾಗಿದೆ.

ಕಳೆದ ಜ.16ರಂದು ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ವಾರಿಯರ್ಸ್ ಗೆ ವ್ಯಾಕ್ಸಿನ್ ನೀಡುವ ಕಾಯ್ರಕ್ರಮಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಕೊವಾಕ್ಸಿನ್ ಚುಚ್ಚುಮದ್ದು ತೆಗೆದುಕೊಂಡು ಇತರೆ ಕೊರೊನಾ ವಾರಿಯರ್‌ಗಳಿಗೆ ಸ್ಪೂರ್ತಿ, ಉತ್ಸಾಹ ತುಂಬ ಬೇಕಾಗಿದ್ದ ಡಿಎಚ್ಒ ನಾಗೇಂದ್ರಪ್ಪ ವಾಕ್ಸಿನ್ ತೆಗೆದುಕೊಳ್ಳುತ್ತಿರುವಂತೆ ಪೋಸ್ ನೀಡಿದರೇ ಹೊರತು ಸೂಜಿ ಸುಚ್ಚಿಸಿಕೊಳ್ಳಲೇ ಇಲ್ಲ. ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಗೂ ಕೂಡ ವಾಕ್ಸಿನ್ ಕೊಡುತ್ತಿರುವಂತೆ ನಟಿಸಲಾಗಿದೆ.

ಈ ಇಬ್ಬರು ಅಧಿಕಾರಿಗಳು ಸರಕಾರಿ ವ್ಯಾಕ್ಸಿನ್ ಮೇಲೆ ನಂಬಿಕೆಯಿಟ್ಟಿಲ್ಲದಿರುವುದು ನಾಚಿಕೆ ಸಂಗತಿ. ಇಂತಹವರು ಆರೋಗ್ಯ ಇಲಾಖೆಯಲ್ಲಿರುವುದು ಸಮಾಜಕ್ಕೆ ದೊಡ್ಡ ಕಳಂಕ. ನಾಟಕವಾಡಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ಹರಾಜು ಹಾಕಿದೆ.

ಆರೋಗ್ಯ ಅಧಿಕಾರಿಗಳು ವಾಕ್ಸಿನ್ ತೆಗೆದುಕೊಂಡು ಇತರರಿಗೂ ಮಾದರಿಯಾಗಬೇಕಿತ್ತು. ಕೊವಾಕ್ಸಿನ್ ವಾಕ್ಸಿನ್ ತೆಗೆದುಕೊಂಡರೆ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲವೆಂಬ ಬಗ್ಗೆ ಮಾನಸಿಕ ಸ್ಥೈರ್ಯ ತುಂಬುವಂತಹ ಕೆಲಸ ಮಾಡಬೇಕಿತ್ತು. ಅದು ಮಾಡದೇ ಪೋಟೋಗಳಿಗೆ ಪೋಸ್ ನೀಡಿದರೆ ಅದು ಸೂಕ್ತ ಪರಿಹಾರವಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.

ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಪೋಸ್ ನೀಡಿ ಇಡೀ ಇಲಾಖೆಗೆ ಮೋಸ ಮಾಡಿರುವ ಇವರ ವಿರುದ್ಧ ಮೇಲಧಿಕಾರಿಯವರು ಸೂಕ್ತ ಕ್ರಮ ಕೈಗೊಂಡು ಅಮಾನತ್ತು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!