Thursday, June 4, 2026
Homeತಾಜಾ ಸುದ್ದಿಮಂಗಳೂರು: ಮೋದಿ ಆಗಮನಕ್ಕೂ ಮುನ್ನ ತುಳುನಾಡ್‌ ಟ್ವೀಟ್‌ ಅಭಿಯಾನ: ತುಳು ಭಾಷೆಗೂ ಅಧಿಕೃತ ಸ್ಥಾನಮಾನಕ್ಕೆ ಹಕ್ಕೊತ್ತಾಯ

ಮಂಗಳೂರು: ಮೋದಿ ಆಗಮನಕ್ಕೂ ಮುನ್ನ ತುಳುನಾಡ್‌ ಟ್ವೀಟ್‌ ಅಭಿಯಾನ: ತುಳು ಭಾಷೆಗೂ ಅಧಿಕೃತ ಸ್ಥಾನಮಾನಕ್ಕೆ ಹಕ್ಕೊತ್ತಾಯ

- Advertisement -
- Advertisement -

ಮಂಗಳೂರು: ತುಳುನಾಡಿನ ವಿವಿಧ ತುಳುಪರ ಸಂಘಟನೆಗಳು ಒಟ್ಟು ಸೇರಿ ತುಳುಭಾಷೆಗೆ ರಾಜ್ಯದ ಅಧಿಕೃತ ಸ್ಥಾನಮಾನ ನೀಡಬೇಕೆಂದು ಹಕ್ಕೊತ್ತಾಯ ಮಂಡನೆಗೆ ನಿರ್ಧರಿಸಿದ್ದು, ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್ 1ರಂದು ಮೂರು ದಿನಗಳವರೆಗೆ ತುಳುನಾಡ್ ಟ್ವೀಟ್ ಅಭಿಯಾನ ನಡೆಸಲು ಮುಂದಾಗಿವೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜೈ ತುಳುನಾಡ್‌ ಸಂಘಟನೆ ಕಾರ್ಯದರ್ಶಿ ಅವಿನಾಶ್‌, ರಾಜ್ಯದಲ್ಲಿ ಕನ್ನಡ ಹೊರತುಪಡಿಸಿ ತುಳುವನ್ನು ಹೆಚ್ಚು ಜನರು ಮಾತನಾಡುತ್ತಾರೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ಪಡೆಯುವ ಎಲ್ಲಾ ಅರ್ಹತೆಗಳು ತುಳು ಭಾಷೆಗಿದೆ. ಆದ್ರೆ ತಾಂತ್ರಿಕ ದೋಷ ಎಂದು ಹೇಳಿಕೊಂಡು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. .

ಸೆಪ್ಟೆಂಬರ್ 2ರಂದು ಮೋದಿ ಮಂಗಳೂರಿಗೆ ಬರುವ ಮೊದಲೇ ಮೂರು ದಿನಗಳ ಕಾಲ ಟ್ವೀಟ್ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿದ್ರು.

- Advertisement -

Latest News

error: Content is protected !!