Friday, June 5, 2026
Homeಕರಾವಳಿಸುಳ್ಯ; ಎರಡನೇ ಮಗುವಿನ ಆಗಮನದ ಖುಷಿಯಲ್ಲಿದ್ದ ಪತ್ನಿಗೆ ವಿದೇಶಿದಿಂದಲೇ ಶಾಕ್ ಕೊಟ್ಟ ಪತಿ: ವಾಟ್ಸಾಪ್ ಮೂಲಕ...

ಸುಳ್ಯ; ಎರಡನೇ ಮಗುವಿನ ಆಗಮನದ ಖುಷಿಯಲ್ಲಿದ್ದ ಪತ್ನಿಗೆ ವಿದೇಶಿದಿಂದಲೇ ಶಾಕ್ ಕೊಟ್ಟ ಪತಿ: ವಾಟ್ಸಾಪ್ ಮೂಲಕ ಬಂತು ಬೆಚ್ಚಿ ಬೇಳಿಸುವ ಸಂದೇಶ

- Advertisement -
- Advertisement -

ಸುಳ್ಯ; ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಿದ್ದರೂ ಇನ್ನೂ ಕೂಡ ಇಂತಹ ಪ್ರಕರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಲೇ ಇವೆ. ಕಾರಣವಲ್ಲದ ಕಾರಣಗಳು ಮುಂದಿಟ್ಟುಕೊಂಡು ತಲಾಖ್ ನೀಡಿ ಮುಸ್ಲಿಂ ಮಹಿಳೆಯರ ಬದುಕನ್ನು ಬೀದಿಗೆ ತರುವವರ ಸಂಖ್ಯೆ ಕಮ್ಮಿಯಾಗಿಲ್ಲ. ಇದೀಗ ಅಂತಹದ್ದೇ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ವಿದೇಶದಲ್ಲಿರುವ ತನ್ನ ಪತಿ ತನಗೆ ವಾಟ್ಸಾಪ್ ಮೂಲಕ ತಲಾಖ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಳ್ಯದ ಮಿಸ್ರಿಯಾ ಎಂಬ ಮಹಿಳೆಯನ್ನು ಕೇರಳದ ತ್ರಿಶೂರ್​ ನಿವಾಸಿ ಅಬ್ದುಲ್ ರಶೀದ್ ಗೆ ಮದುವೆ ಮಾಡ ಕೊಡಲಾಗಿತ್ತು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪತಿಯೊಂದಿಗೆ ವಿದೇಶಕ್ಕೆ ತೆರಳಿದ್ದ ಮಿಸ್ರಿಯಾ ಎರಡನೇ ಹೆರಿಗೆಗಾಗಿ ತವರಿಗೆ ಆಗಮಿಸಿದ್ದು 6 ತಿಂಗಳಿಂದ ಸುಳ್ಯದಲ್ಲಿ ನೆಲೆಸಿದ್ದಾರೆ. ಈ ಮಧ್ಯೆ ಇಬ್ಬರ ಮಧ್ಯೆ ವೈಮನಸ್ಸು ಮೂಡಿದ್ದು ಗಂಡ ಅಬ್ದುಲ್ ರಶೀದ್ ದಿಢೀರನೆ ವಾಟ್ಸಾಪ್ ಮೂಲಕ ತಲಾಕ್ ಸಂದೇಶ ರವಾನಿಸಿದ್ದಾನೆ.

ಪತಿಯ ಸಂದೇಶ ಕಂಡು ಶಾಕ್ ಗೆ ಒಳಗಾದ ಮಿಸ್ರಿಯಾ ದಿಕ್ಕು ದೋಚದೆ ಇದೀಗ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಶೀದ್ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!