- Advertisement -
- Advertisement -
ಸುಳ್ಯ; ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ದರ್ಶನಾರ್ಥಿ ಸುಳ್ಯದ ವಕೀಲರ ತಂಡದಿಂದ ಶಬರಿಮಲೆ ಯಾತ್ರೆಯ ಭಾಗವಾದ ಪವಿತ್ರ ಪಂಪಾ ನದಿಯಲ್ಲಿ ಭಕ್ತಾದಿಗಳು ಬಿಸಾಡಿದ ಪ್ಲಾಸ್ಟಿಕ್ ಚೀಲ, ಬಾಟಲಿಗಳು, ಬಟ್ಟೆಗಳು ಮುಂತಾದವುಗಳನ್ನು ಸ್ವಚ್ಛಗೊಳಿಸುವ ಸೇವಾ ಕಾರ್ಯ ನಡೆಸಿದರು.
ಗುರುಸ್ವಾಮಿ ಹಿರಿಯ ನ್ಯಾಯವಾದಿ ರಾಮಕೃಷ್ಣ ಅಮೈ ಅವರು ಈ ಕುರಿತು ಮಾತನಾಡಿ ನಮ್ಮ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಮಲಿನಗೊಳಿಸಬಾರದು. ಇಂತಹ ಕ್ಷೇತ್ರಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಕರ್ತವ್ಯ ನಮ್ಮ ಮೇಲಿದೆ.. ವಿದ್ಯಾವಂತ ಸಮಾಜ ಕಸ ಬಿಸಾಡುವ ಮುನ್ನ ಯೋಚಿಸಬೇಕು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಸ್ವಚ್ಛ ಭಾರತ ಕನಸನ್ನು ಸಾಕಾರಗೊಳಿಸೋಣ ಮತ್ತು ನಮ್ಮ ಈ ಸ್ವಚ್ಛತಾ ಕಾರ್ಯ ಪ್ರಚಾರಕ್ಕೋಸ್ಕರ ಅಲ್ಲ ಸಮಾಜದಲ್ಲಿ ಜಾಗೃತಿಗಾಗಿ ಎಂದು ತಿಳಿಸಿದರು.
- Advertisement -