- Advertisement -
- Advertisement -
ಮೂಡಬಿದರೆ; ಸ.ಕಿ.ಪ್ರಾ.ಶಾಲೆ, ಮಕ್ಕಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾದ ಶೂ ಸಾಕ್ಸ್ ವಿತರಣಾ ಕಾರ್ಯಕ್ರಮ ನಡೆಯಿತು.
ಶೂ ಸಾಕ್ಸ್ ವಿತರಿಸಿ ಮಾತನಾಡಿದ ಶಿರ್ತಾಡಿ ಗ್ರಾಮ ಪಂಚಾಯತ್ ಆಧ್ಯಕ್ಷರಾದ ಆಗ್ನೆಸ್ ಡಿಸೋಜಾ ಅವರು ಅವರು, ಸರ್ಕಾರ ಮತ್ತು ಸಮುದಾಯ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲಾ ವಿದ್ಯಾರ್ಥಿಗಳೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಮುಖ್ಯೋಪಾಧ್ಯಾಯಿನಿ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕ ಗಣರಾಜ್ ಸ್ವಾಗತಿಸಿ,ನಿರೂಪಿಸಿದರು. ಗೌರವಶಿಕ್ಷಕಿ ಮಾನಸ ವಂದಿಸಿದರು. ಎಲ್ಲಾ ಪೋಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.
- Advertisement -