Saturday, June 6, 2026
Homeಕರಾವಳಿಉಡುಪಿಸುಳ್ಯ; ಚೌತಿ ಪ್ರಯುಕ್ತ ಲಕ್ಕಿಡ್ರಾಂ ನಲ್ಲಿ ಪ್ರಥಮ ಬಹುಮಾನ ವಿಸ್ಕಿ, ದ್ವಿತೀಯ ಪ್ರೈಜ್  ಒಂದು ಕೇಸ್...

ಸುಳ್ಯ; ಚೌತಿ ಪ್ರಯುಕ್ತ ಲಕ್ಕಿಡ್ರಾಂ ನಲ್ಲಿ ಪ್ರಥಮ ಬಹುಮಾನ ವಿಸ್ಕಿ, ದ್ವಿತೀಯ ಪ್ರೈಜ್  ಒಂದು ಕೇಸ್ ಬಿಯರ್; ಲಾಟರಿ ಟಿಕೆಟ್ ವೈರಲ್ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಗರಂ

- Advertisement -
- Advertisement -

ಸುಳ್ಯದ ಜಯನಗರದಲ್ಲಿ ಚೌತಿಯ ಪ್ರಯುಕ್ತದ ಲಾಟರಿ ಟಿಕೆಟ್ ಫೋಟೋವೊಂದು ಎಲ್ಲ ಕಡೆ ವೈರಲ್ ಆಗಿದ್ದು ಅದರಲ್ಲಿ ಪ್ರಥಮ ಬಹುಮಾನ ಬ್ಲಾಕ್ ಅಂಡ್ ವೈಟ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ಹಾಗೂ ದ್ವಿತೀಯ ಬಹುಮಾನ ಒಂದು ಕೇಸ್ ಯು ಬಿ ಬಿಯರ್ ಎಂದು ಬರೆಯಲಾಗಿದೆ. ಟಿಕೆಟ್ ದರ 100 ರೂ. ಎಂದು ಪ್ರಿಂಟ್ ಆಗಿದೆ. ಲಾಟರಿ ಟಿಕೆಟ್ ನ ಫೋಟೋ ವೈರಲ್ ಆಗುತ್ತಿದ್ದಂತೆ ಸಂಘಟಿಸುವವರ ವಿರುದ್ಧ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ  ತೀವ್ರ ಆಕ್ರೋಶ ಹೊರ ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ಈ ರೀತಿ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ಕೀಳು ಮಟ್ಟದ ಮನಸ್ಥಿತಿಯ ವ್ಯಕ್ತಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!