Saturday, June 6, 2026
Homeಕರಾವಳಿಬೆಳ್ತಂಗಡಿಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು ಹಲ್ಲೆ ನಡೆಸಿದ ಯುವಕರಿಗೆ ಥಳಿಸಿದ ಸಾರ್ವಜನಿಕರು

ಬೆಳ್ತಂಗಡಿಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು ಹಲ್ಲೆ ನಡೆಸಿದ ಯುವಕರಿಗೆ ಥಳಿಸಿದ ಸಾರ್ವಜನಿಕರು

- Advertisement -
- Advertisement -

ಬೆಳ್ತಂಗಡಿ: ಕಾರಿನಲ್ಲಿದ್ದ ಪ್ರಯಾಣಿಕರು ಮತ್ತು ಬೈಕ್ ಸವಾರರ ಮಧ್ಯೆ ಜಗಳ ಸಂಭವಿಸಿ ಕೊನೆಗೆ ಕಾರಿನಲ್ಲಿದ್ದವರಿಗೆ ಸಾರ್ವಜನಿಕರು ಥಳಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಕಾರು ಬೈಕ್ ಗೆ ಡಿಕ್ಕಿ ಹೊಡೆದಿದ್ದಲ್ಲದೇ ಬೈಕ್ ಸವಾರನಿಗೆ ಕಾರಿನಲ್ಲಿದ್ದ ಯುವಕರು ಹಲ್ಲೆ ನಡೆಸಿದ್ದರು.

ಹೀಗಾಗಿ ಕಾರಿನಲ್ಲಿದ್ದ ಮೂವರು ಯುವಕರಿಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಥಳಿಸಿದ್ದು, ಮೂವರು ಯುವಕರು ಸಕಲೇಶಪುರ ತಾಲೂಕಿನ ಹಾನುಬಾಳು ನಿವಾಸಿಗಳಾಗಿದ್ದಾರೆ.

ಮಂಗಳೂರಿನಿಂದ ಸಕಲೇಶಪುರ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದ ಮೂವರು ಯುವಕರಾದ ಶ್ಯಾಮ್ ಪ್ರಸಾದ್, ಸುದೀಪ್ ಮತ್ತು ಅಕ್ಷಯ್ ಬೈಕ್ ಸವಾರ ಪಶ್ಚಿಮ ಬಂಗಾಳದ ಮೂಲದ ರಹಿಮುದ್ದಿನ್ ಮೇಲೆ ಹಲ್ಲೆ ನಡೆಸಿದ್ದರು.

- Advertisement -

Latest News

error: Content is protected !!